For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ನಲ್ಲಿ ದೀಪಿಕಾ ಬಗ್ಗೆ ಸಿದ್ದಾರ್ಥ ಮಲ್ಯ ಹೇಳಿದ್ದೇನು?

  |

  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಉದ್ಯಮಿ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ ಮಲ್ಯ ನಡುವಿನ ಪ್ರೇಮ ಮುರಿದುಬಿದ್ದಿರುವುದು ಅಧಿಕೃತವಾದಂತಾಗಿದೆ. ಎಷ್ಟೋ ದಿನಗಳ ಹಿಂದೆಯೇ ಇವರಿಬ್ಬರ ಪ್ರೇಮಪ್ರಕರಣ ಅಂತ್ಯವಾದ ಬಗ್ಗೆ ಗುಸುಗುಸು ಪಿಸುಪಿಸು ಎಲ್ಲೆಡೆ ಹರಡಿತ್ತು. ಆದರೆ ಅವರಿಬ್ಬರಲ್ಲಿ ಯಾರೂ ಅದನ್ನು ಬಾಯ್ಬಿಟ್ಟಿರಲಿಲ್ಲ ಅಷ್ಟೇ.

  ಇತ್ತೀಚಿಗೆ ಮುಂಬೈನಲ್ಲಿ ನಡೆದ ಮ್ಯಾರಥಾನ್ ಸಂದರ್ಭದಲ್ಲಿ ದೀಪಿಕಾ ಗೈರು ಹಾಜರಾಗಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ ಸಿದ್ಧಾರ್ಥ, "ಯಾರು ನನ್ನ ಬಗ್ಗೆ ಕಾಳಜಿ ಹೊಂದಿದ್ದಾರೆ ಮತ್ತು ಯಾರು ತಮ್ಮ ಸ್ವಂತ ಲಾಭಕ್ಕಾಗಿ ನನ್ನನ್ನು ಬಳಸಿಕೊಂಡರು ಎಂಬುದೀಗ ಅರಿವಾಗಿದೆ. ಮ್ಯಾರಥಾನ್ ಸ್ಥಳದಲ್ಲಿ ನನ್ನ ತಾಯಿ ಮತ್ತು ಸ್ನೇಹಿತರನ್ನು ನೋಡಿ ಸಂತಸವಾಯಿತು" ಎಂದಿದ್ದಾರೆ.

  ಕಳೆದ ವರ್ಷ ಮುಂಬೈ ಮ್ಯಾರಥಾನ್ ನಡೆದಿದ್ದ ವೇಳೆ ಸಿದ್ಧಾರ್ಥನನ್ನು ಸ್ವಾಗತಿಸಲು ದೀಪಿಕಾ ಪಡುಕೋಣೆ ಇದ್ದಳು. ಆದರೆ ಈ ಬಾರಿ ಆಕೆಯ ಸುಳಿವೂ ಇಲ್ಲ, ಸುದ್ದಿಯೂ ಇಲ್ಲ. ಕೆಟ್ಟಮೇಲೆ ಬುದ್ದಿಬಂದವರ ತರ ಆಡುತ್ತಿದ್ದಾರೆ ಸಿದ್ಧಾರ್ಥ. ಪ್ರೀತಿ ಎಂಬ ಹೆಸರಿನಲ್ಲಿ ಯುವಜನತೆ ನಡೆಸುತ್ತಿರುವ ಪ್ರಣಯ ಪ್ರಕರಣಕ್ಕೆ ಇದೊಂದು ಹೊಸ ಸೇರ್ಪಡೆ. (ಒನ್ ಇಂಡಿಯಾ ಕನ್ನಡ)

  English summary
  This is the News of Actress Deepika Padukone and Siddharth Malya Love Break. It is confirmed by Siddharth's tweeter.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X