twitter
    For Quick Alerts
    ALLOW NOTIFICATIONS  
    For Daily Alerts

    ಡಾ ರಾಜ್ ಕಾಲದ ನಟಿ ಗೀತಾ ಮತ್ತೆ 'ವಿಷ್ಣು' ಜೊತೆ

    |

    Geetha
    ಡಾ. ರಾಜ್ ಹಾಗೂ ಡಾ. ವಿಷ್ಣುವರ್ಧನ್ ಕಾಲದಲ್ಲಿ ಕನ್ನಡದ ನಾಯಕಿಯಾಗಿ ಪ್ರಖ್ಯಾತಿ ಪಡೆದಿದ್ದ ನಟಿ 'ಗೀತಾ' ಬಹುದಿನಗಳ ನಂತರ ಮತ್ತೆ ಕನ್ನಡದಲ್ಲಿ ಬಣ್ಣ ಹಚ್ಚಿದ್ದಾರೆ. ಅಭಿಜಿತ್ ನಟನೆ ಹಾಗೂ ನಿರ್ದೇಶನ ಹೊಂದಿರುವ ಇದೀಗ ತೆರೆಯ ಮೇಲೆ ಪ್ರದರ್ಶನವಾಗುತ್ತಿರುವ ಚಿತ್ರ 'ವಿಷ್ಣು'ವಿನಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ ಪಂಚಭಾಷಾ ತಾರೆಯಾಗಿ ಮೆರೆದವರು ಗೀತಾ.

    ಡಾ ರಾಜ್ ಕುಮಾರ್, ಅನಂತ್ ನಾಗ್, ಅಂಬರೀಷ್ ಹೀಗೆ ಆಗಿನ ತಲೆಮಾರಿನ ನಟರೊಂದಿಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ ಗೀತಾ ಮದುವೆಯಾಗಿ ಅಮೇರಿಕಕ್ಕೆ ತೆರಳಿದ ನಂತರ ನಟನೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಆಗಾಗ ತವರು ಭಾರತಕ್ಕೆ ಮರಳುತ್ತಿದ್ದ ಗೀತಾ, ಚಿತ್ರರಂಗದ ನಂಟನ್ನು ಬಿಟ್ಟಿರಲಿಲ್ಲ.

    ಹಳೆಯ ತಲೆಮಾರಿನ ಚೆಲುವೆಯರಲ್ಲಿ ಗೀತಾ ಕೂಡ ಒಬ್ಬರು. ಈಗಲೂ ಮುಖದಿಂದ ಗ್ಲಾಮರ್ ಕಳೆ ಸಂಪೂರ್ಣ ಮಾಯವಾಗಿಲ್ಲ. ಕಲೆಯಂತೂ ರಕ್ತದಲ್ಲೇ ಇದೆ. ಇದೀಗ ಪೋಷಕ ಪಾತ್ರದ ಮೂಲಕ ಮತ್ತೆ ಕನ್ನಡಕ್ಕೆ ಬಂದಿರುವ ಗೀತಾ, ಚಿತ್ರ ಗೆಲ್ಲದಿದ್ದರೂ ಅವರ ಪಾತ್ರದ ಮೂಲಕ ಕನ್ನಡಿಗರನ್ನು ಗೆದ್ದಿದ್ದಾರೆ. (ಒನ್ ಇಂಡಿಯಾ ಕನ್ನಡ)

    English summary
    Actress Geetha acted in kannada movie Vishnu. This movie has abhijith acting and direction.
 
    Thursday, December 22, 2011, 16:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X