ನಮಿತಾ ಸಿನಿಮಾ ಬಿಟ್ಟು ಪಾಲಿಟಿಕ್ಸ್ ಗೆ ಜಿಗಿತ!

By Mahesh

ಸ್ಥೂಲ ಸುಂದರಿ ನಮಿತಾಳಿಗೆ ಈ ನಡುವೆ ಯಾಕೋ ಸಕತ್ ಬೋರ್ ಅಂತೆ. ತನ್ನ ಆಪ್ತ ಸಹಾಯಕಿ ಜೊತೆಗೂಡಿ ಹಾಗೆ ಒಂದು ರೌಂಡ್ ತಮಿಳುನಾಡಿನ ಹಳ್ಳಿಗಳ ಕಡೆ ಸುತ್ತಿ ಬಂದಿದ್ದಾರೆ. ಎಲ್ಲೆಡೆ ಅಮ್ಮನ ದರ್ಶನವಾಗಿದೆ.

ಅಮ್ಮ ಎಂದರೆ ಭಗವಾನ್ ಅಪ್ಪಿಕೋ ಅಮ್ಮ ಅಲ್ಲ. ತಮಿಳುನಾಡಿನ ಕುವರಿ ಜಯಲಲಿತಾ ಅಮ್ಮ. ಎಲ್ಲಾ ಕಡೆ ಕಟೌಟ್, ಬ್ಯಾನರ್ ಗಳಲ್ಲಿ ಜಯಲಲಿತಾ ರಾರಾಜಿಸುತ್ತಿದ್ದನ್ನು ಕಂಡು ನಮಿತಾ ಪುಳಕಿತಳಾಗಿದ್ದಾಳೆ.

ಪ್ರತಿ ಚಿತ್ರದಲ್ಲೂ ಡಿಫೆರೆಂಟ್ ಪಾತ್ರ ಮಾಡ ಬಯಸುವ ನಮಿತಾಳಿಗೆ, ಒಂದೇ ರೀತಿ ಪಾತ್ರಗಳು ಸಿಗುತ್ತಿರುವುದು ಬೋರ್ ಆಗುವುದಕ್ಕೆ ಕಾರಣವಂತೆ. ಬರೀ ದುಡ್ಡಿಗೊಸ್ಕರ ಚಿತ್ರ ಮಾಡುವ ದರ್ದು ನನಗಿಲ್ಲ. ನನ್ನ ಅಭಿಮಾನಿಗಳು ನನ್ನಿಂದ ಒಳ್ಳೆ ಪಾತ್ರ ನಿರೀಕ್ಷಿಸುತ್ತಾರೆ ಎಂದು ನಮಿತಾ ಅಭಿಪ್ರಾಯಪಟ್ಟಿದ್ದಾಳೆ.

ಕಾಲಿವುಡ್ ನ ಗ್ಲಾಮರ್ ಗಿಂತ ಪಾಲಿಟಿಕ್ಸ್ ನ ರಂಗು ಆಕೆಯೆ ಇಷ್ಟವಾಗುತ್ತಿದೆಯಂತೆ. ಈ ಬಗ್ಗೆ ಸ್ವತಃ ನಮಿತಾಳೇ ಘೋಷಿಸಿದ್ದಾಳೆ. ದೈನಂದಿನ ಆಗು ಹೋಗುಗಳನ್ನು ತಿಳಿದು ಕೊಳ್ಳುವ ಬಯಕೆ ಉಂಟಾಗುತ್ತಿದೆ. ರಾಜಕೀಯ ಸೇರಿ ಜನರಿಗೆ ಏನಾದರೂ ಒಳ್ಳೆದು ಮಾಡುವ ಹಂಬಲವಿದೆ. ಆದರೆ, ಈಗ ಅದಕ್ಕೆ ಸಮಯವಲ್ಲ. ಬಹುಶಃ ಕೆಲ ವರ್ಷಗಳ ನಂತರ ನನ್ನನ್ನು ಸಕ್ರಿಯ ರಾಜಕಾರಣಿ ರೋಲ್ ನಲ್ಲಿ ನೀವು ಕಾಣಬಹುದು ಎಂದಿದ್ದಾಳೆ.

ತಮಿಳುನಾಡಿನ ಜನತೆ ಕೊಟ್ಟಿರುವ ಪ್ರೀತಿ ಆದರಕ್ಕೆ ನಾನು ಚಿರಋಣಿ. ಚಿತ್ರರಂಗ ಬಿಡುತ್ತೀನಿ ಎಂಬ ಗಾಳಿಸುದ್ದಿಗೆ ಕಿವಿಕೊಟ್ಟು ನಿಮ್ಮ ಹಾರ್ಟ್ ಬ್ರೇಕ್ ಮಾಡಿಕೊಳ್ಳಬೇಡಿ. ನಾನು ಇನ್ನೂ ಇಲ್ಲೇ ಇರುತ್ತೀನಿ ಎಂದಿದ್ದಾಳೆ ನಮಿತಾ. ಅಬ್ಬಾ ಸದ್ಯ ಎಂದು ಪಡ್ಡೆಗಳು ನಿಟ್ಟುಸಿರುಬಿಟ್ಟಿದ್ದಾರೆ.

More from Filmibeat

English summary
Sensual Actress Namitha is getting bored by doing stereotype roles.Now Tamil Nadu politics seen to be more fascinating her than Kollywood. She is decided to enter active politics but not now may be after some years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X