ಮದುವೆ ಬಗ್ಗೆ ಮೌನ ಮುರಿದ ನಿಖಿತಾ ತುಕ್ರಲ್
ದರ್ಶನ್ ಜೊತೆಗೆ ಸಂಬಂಧ, ವಿವಾದಗಳಲ್ಲಿ ತೇಲಾಡಿದ ನಟಿ ನಿಖಿತಾ ಮದುವೆ ಯಾವಾಗ? ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಖಿತಾ, ಸದ್ಯಕ್ಕೆ ಸುನಾಮಿಯಂತೆ ಅಪ್ಪಳಿಸಿದ ವಿವಾದಗಳ ಹೊಡೆತದಿಂದ ಹೊರಬರಬೇಕಾಗಿದೆ. ಆ ಬಳಿಕವಷ್ಟೇ ನನ್ನ ಮದುವೆ.
ನನಗೆ ಯಾವ ರೀತಿಯ ಗಂಡು ಬೇಕು, ನಮ್ಮ ಮನೆಗೆ ಬರುವ ವರ ಮಹಾಶಯ ಹೇಗಿರಬೇಕು ಎಂಬ ವಿಚಾರಗಳು ಅಮ್ಮನಿಗೆ ಬಿಟ್ಟದ್ದು. ನನ್ನ ಕೆಲಸ ಬರಿ ತಾಳಿಕಟ್ಟಿಸಿಕೊಳ್ಳುವುದಷ್ಟೆ. ನಮ್ಮ ಅಮ್ಮ ಆಯ್ಕೆ ಮಾಡಿದ ಹುಡುಗನೇ ಫೈನಲ್ ಎಂದಿದ್ದಾರೆ ನಿಖಿತಾ.
ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಏನಾದರೂ ಭೇಟಿ ನೀಡುವ ಪ್ಲಾನ್ ಏನಾದರೂ ಇತ್ತಾ ಎಂದರೆ, ಅಯ್ಯೋ ನಾನ್ಯಾಕೆ ಹೋಗಲಿ. ಇದಕ್ಕೆಂದೇ ಕಾಯುತ್ತಿರುವವರು ಬಹಳಷ್ಟು ಮಂದಿ ಇದ್ದಾರೆ. ದರ್ಶನ್ ಮತ್ತು ಅವರ ಪತ್ನಿ ಗಲಾಟೆಗೆ ನನ್ನನ್ನೇ ವಿಲನ್ ಮಾಡಿಬಿಡುತ್ತಾರೆ! (ಏಜೆನ್ಸೀಸ್)
More from Filmibeat
English summary
Talking about her marriage actress Nikita Thukral says, As far as my marriage is concerned, my mother will decide when I should get married and to whom.


Click it and Unblock the Notifications











