For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರ ಶಿವಕಾಶಿಗೆ ಬಂದ ವಿವಾದಿತ ತಾರೆ ರಂಜಿತಾ

  By Rajendra
  |

  ಹಲವಾರು ವಿವಾದಗಳಿಂದ ಸುದ್ದಿಯಾಗಿದ್ದ ನಟಿ ರಂಜಿತಾ ಈಗ ಮತ್ತೆ ಬಣ್ಣ ಹಚ್ಚಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. 'ಶಿವಕಾಶಿ' ಎಂಬ ಕನ್ನಡ ಚಿತ್ರದ ಹಾಡೊಂದರಲ್ಲಿ ಅವರು ಅಭಿನಯಿಸಲಿದ್ದಾರೆ. ಆದರೆ ಇದು ಐಟಂ ಸಾಂಗ್ ಅಲ್ಲ ಎಂಬುದು ನಿಮ್ಮ ಗಮನಕ್ಕಿರಲಿ. ವಿಶೇಷ ಎಂದರೆ ಕನ್ನಡ ಬೆಳ್ಳೆತೆರೆಯ ಒಂದು ಕಾಲದ ಜನಪ್ರಿಯ ಜೋಡಿ ಅನಂತನಾಗ್ ಮತ್ತು ಲಕ್ಷ್ಮಿ ಈ ಚಿತ್ರದಲ್ಲಿ ನಟಿಸುತ್ತಿರುವುದು.

  ಈ ಚಿತ್ರ ಯಾಕೋ ಏನೋ ಸುದೀರ್ಘ ಸಮಯದಿಂದ ಚಿತ್ರೀಕರಣ ಹಂತದಲ್ಲೇ ಇದೆ. ಚಿತ್ರೀಕರಣ ಈಗ ಮತ್ತೆ ಚುರುಕುಗೊಂಡಿದ್ದು ತಮ್ಮ ಭಾಗದ ಚಿತ್ರೀಕರಣದಲ್ಲಿ ರಂಜಿತಾ ಪಾಲ್ಗೊಳ್ಳಲಿದ್ದಾರೆ. ಒಟ್ಟಿನಲ್ಲಿ ರಂಜಿತಾ ಆಗಮನದಿಂದ ಚಿತ್ರತಂಡದಲ್ಲಿ ಹೊಸ ಹುಮ್ಮಸ್ಸು ಬಂದಂತಾಗಿದೆಯಂತೆ. ಬಿ ರಾಮಪ್ರಕಾಶ್ ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರ 'ಶಿವಕಾಶಿ'.

  ಅನಂತ್ ಮತ್ತು ಲಕ್ಷ್ಮಿ ಸುದೀರ್ಘ ವಿರಾಮದ ನಂತರ ಮತ್ತೆ ಕಣ್ಣ್ಣಲ್ಲಿ ಕಣ್ಣಿಟ್ಟು ನೋಡುವಂತಾಗಿದೆ ಈ ಚಿತ್ರದ ಮೂಲಕ . ಹಲವಾರು ಸಂದರ್ಭಗಳಲ್ಲಿ ಇವರಿಬ್ಬರೂ ಒರಟೊರಟಾಗಿ ಒಬ್ಬರನೊಬ್ಬರು ನಿಂದಿಸಿಕೊಂಡು ದೂರಾಗಿದ್ದರು. ಡಿ.ರಾಜೇಂದ್ರ ಬಾಬು ಅವರ 'ಅಮ್ಮ' ಚಿತ್ರವೇ ಅವರಿಬ್ಬರೂ ನಟಿಸಿದ ಕೊನೆಯ ಚಿತ್ರ.

  English summary
  Actress Ranjitha to act in Kannada film Shivakashi. The movie is directing by Ramaprakash B. The movie also leads Ananth Nag and Lakshmi. Sources says that Ranjitha is appearing in a song in the film. But the song is not an Item one.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X