ಮಂಗಳೂರು ಮಲ್ಲಿಗೆ ಸ್ನೇಹಾ ಉಲ್ಲಾಳ್ ದಿಲ್ ಖುಷ್

By Rajendra

ಮಂಗಳೂರ ಮಲ್ಲಿಗೆ ಸ್ನೇಹಾ ಉಲ್ಲಾಳ್ ಇನ್ನೊಂದು ಚಿತ್ರಕ್ಕೆ ಬುಕ್ ಆಗಿದ್ದಾಳೆ. ಮಧು ಬಂಗಾರಪ್ಪನವರ 'ದೇವಿ' ಚಿತ್ರದ ಮೂಲಕ ಕನ್ನಡದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದರು ಸ್ನೇಹಾ. ಪ್ರಶಾಂತರಾಜ್ ನಿರ್ದೇಶನದ ದಿಲ್‌ಖುಷ್ ಚಿತ್ರದಲ್ಲಿ ಸ್ನೇಹಾ ನಾಯಕಿಯಾಗುವ ಸಾಧ್ಯತೆಗಳು ಹೆಚ್ಚಾಗಿದೆ.

ಈ ಮೊದಲು ಪ್ರಶಾಂತ್ ಚಿರು ಹೀರೋಯಿನ್ ಕೃತಿ ಖರಬಂದಾಳನ್ನು ಬುಕ್ ಮಾಡಿದ್ದರು. ಕಾರಣಾಂತರಗಳಿಂದ ಕೃತಿ ಬದಲು ಆ ಆಸ್ಥಾನವನ್ನು ಸ್ನೇಹಾ ತುಂಬಿದ್ದಾಳೆ. ಈಗಾಗಲೇ ಉಲ್ಲಾಳ್ ಜೊತೆ ಒಂದು ಹಂತದ ಮಾತುಕತೆ ಆಗಿದೆ.

ಏಕಕಾಲದಲ್ಲಿ ದಿಲ್‌ಖುಷ್ ಕನ್ನಡ, ತಮಿಳು ಮತ್ತು ತೆಲುಗಲ್ಲಿ ತೆರೆದುಕೊಳ್ಳುವ ಸಾಧ್ಯತೆ ಇರುವುದರಿಂದ ಪ್ರಶಾಂತ್ ಸ್ನೇಹಾಳನ್ನು ಸಂಪರ್ಕಿಸಿದ್ದಾರೆ ಎಂಬ ಸುದ್ದಿಯೂ ಇದೆ. ಮಂಗಳೂರಿನವಳೇ ಆಗಿರುವ ಸ್ನೇಹಾ ಬಾಲಿವುಡ್‌ನಲ್ಲಿ ಜ್ಯೂನಿಯರ್ ಐಶ್ವರ್ಯಾ ರೈ ಎಂದು ಹೆಸರುಮಾಡಿದ್ದಾಳೆ. ಕಣ್ಣಲ್ಲೇ ಕುಂಟಾಬಿಲ್ಲೆ ಆಡುವ ಈಕೆ ಕಮರ್ಷಿಯಲ್ ಆಗಿ ಕನ್ನಡಿಗರ "ದಿಲ್‌ಖುಷ್" ಮಾಡುತ್ತಾಳಾ?! (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Mangalore beaty Sneha Ullal back to Kannada films. ‘Love Guru and Gana Bajana’ director Prashanthraj narrated a story to Sneha. The film has titled as Dil Khush. This is an multilingual movie made in Telugu and Tamil also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X