ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಐಟಂ ಗರ್ಲ್ ಎಸ್ಕೇಪ್

By Rajendra

ಐಟಂ ಗರ್ಲ್, ಸಿನಿಮಾ ತಾರೆ ಅಲ್ಫೋನ್ಸಾ ಚೆನ್ನೈ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಸಡನ್ ಆಗಿ ಎಸ್ಕೇಪ್ ಆಗಿದ್ದಾರೆ. ಆಕೆ ಹೈದರಾಬಾದಿನ ರಹಸ್ಯ ಪ್ರದೇಶದಲ್ಲಿ ಇರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆಕೆಯ ಪ್ರಿಯತಮ ವಿನೋದ್ ಇತ್ತೀಚೆಗೆ ಆಕೆಯ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಅಸುನೀಗಿದ್ದರು.

ಈ ಹಿನ್ನೆಲೆಯಲ್ಲಿ ಅಲ್ಫೋನ್ಸಾ ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಈ ಬಗ್ಗೆ ವಿನೋದ್ ಬಂಧುಮಿತ್ರರು ಪೊಲೀಸರಿಗೆ ದೂರು ನೀಡಿದ್ದರು. ವಿನೋದ್ ಅವರದು ಹತ್ಯೆಯೇ ಅಥವಾ ಆತ್ಮಹತ್ಯೆಯೇ ಎಂದು ಪೊಲೀಸರು ವಿಚಾರಣೆ ಮಾಡುತ್ತಿದ್ದರು. ಅಷ್ಟರಲ್ಲಾಗಲೆ ಅಲ್ಫೋನ್ಸಾ ಎಸ್ಕೇಪ್ ಆಗಿದ್ದಾರೆ.

ತನ್ನನ್ನು ಎಲ್ಲಿ ಪೊಲೀಸರು ಬಂಧಿಸುತ್ತಾರೋ ಎಂಬ ಭಯದ ಕಾರಣ ಅಲ್ಫೋನ್ಸಾ ಮುಂಜಾಗ್ರತೆಯಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಫೋನ್ಸಾ ಅವರಿಗೆ ಜಾಮೀನು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಫೋನ್ಸಾ ರಹಸ್ಯ ಸ್ಥಳಕ್ಕೆ ಎಸ್ಕೇಪ್ ಆಗಿದ್ದಾರೆ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)

More from Filmibeat

English summary
Actress Alphonsa, who is in police interrogation has absconded suddenly from Chennai. It is said that the actress is now hiding somewhere in Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X