ನೆಚ್ಚಿನ ಚಿತ್ರಮಂದಿರಗಳಲ್ಲಿ ಅಂತರಾತ್ಮ
'ಅಂತರಾತ್ಮ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶಂಕರ್ ನಿರ್ದೇಶನದ 'ಅಂತರಾತ್ಮ' ವಿನೂತನ ಪ್ರೇಮಕಥೆಯಿಂದ ಕೂಡಿರುವ ಹಾಗೂ ಕುತೂಹಲಕಾರಿ ಸನ್ನಿವೇಶಗಳನ್ನೊಳಗೊಂಡ ಚಿತ್ರ. ಫ್ರೆಂಡ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ.
ರಾಷ್ಟ್ರಪ್ರಶಸ್ತಿ ವಿಜೇತ ಕಲಾವಿದೆ ಉಮಾಶ್ರೀ ಈ ಚಿತ್ರದಲ್ಲಿ ಮಂತ್ರವಾದಿಯ ಪಾತ್ರ ನಿರ್ವಹಣೆ ಮಾಡಿದ್ದು, ಅವರ ಪಾತ್ರ ನೋಡುಗರ ಮನಸೂರೆಗೊಳ್ಳಲಿದೆ ಎನ್ನುತ್ತಾರೆ ನಿರ್ದೇಶಕರು. ಸುಂದರನಾಥ್ ಸುವರ್ಣ ಛಾಯಾಗ್ರಹಣ, ಗಿರಿಧರ ದಿವಾನ್ ಸಂಗೀತ, ವಿ.ಮನೋಹರ್, ಚೇತನ್, ಆರ್ಯ ಗೀತರಚನೆ, ಶ್ರೀ ಸಂಕಲನ, ಮಂಜುನಾಥ್ ಸಂಭಾಷಣೆ, ಹೊಸ್ಮನೆ ಮೂರ್ತಿ ಕಲೆ ಚಿತ್ರಕ್ಕಿದೆ.
ಚಿನ್ನಿಪ್ರಕಾಶ್ ನೃತ್ಯ, ರಾಮಣ್ಣನವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಮಿಥುನ್ ತೇಜಸ್ವಿ, ವಿಶಾಖ ಸಿಂಗ್(ಬಾಂಬೆ), ರೋಹನ್ ಗೌಡ, ಸುಮನ್ ರಂಗನಾಥ್, ಉಮಾಶ್ರೀ, ಹರೀಶ್ ರಾಯ್, ಮೈಕಲ್ ಮಧು, ರೇಖಾದಾಸ್ ಮುಂತಾದವರಿದ್ದಾರೆ.
ಅಂತರಾತ್ಮ ಮಿಥುನ್ ತೇಜಸ್ವಿ ವಿಶಾಖ ಸಿಂಗ್ ರಂಗಾಯಣ ರಘು ಉಮಾಶ್ರೀ ಸುಮನ್ ರಂಗನಾಥ್ ಹರೀಶ್ ರಾಜ್ antharathma mithun tejaswi visha singh rangayana raghu umasri suman ranganath harish rai


Click it and Unblock the Notifications