ನಕಲಿ ಐಶ್ವರ್ಯ ರೈರನ್ನು ಹಿಡಿದ ಬಿಗ್ ಬಿ ಅಮಿತಾಬ್

By Rajendra

ಐಶ್ವರ್ಯ ರೈ ಪ್ರಸವಾನಂತರದ ಫೋಟೋ ಎಂದುಕೊಂಡು ಅಂತರ್ಜಾಲದಲ್ಲಿ ಒಂದು ಸುತ್ತುಹಾಕಿಕೊಂಡು ಬಂದ ಈ ಫೋಟೋ ಬಗ್ಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಮೌನ ಮುರಿದಿದ್ದಾರೆ. ಈ ಫೋಟೋ ನಕಲಿ ಎಂದು ಒನ್‌ಇಂಡಿಯಾ ಕನ್ನಡ ಕೂಡ ಪ್ರಕಟಿಸಿತ್ತು. ಇದೇ ಮಾತನ್ನು ಬಿಗ್ ಬಿ ಕೂಡ ಹೇಳಿದ್ದಾರೆ.

ಅಮಿತಾಬ್ ತಮ್ಮ ಬ್ಲಾಗ್‌ನಲ್ಲಿ ಅಸಲಿ ಹಾಗೂ ನಕಲಿ ಫೋಟೋಗಳೆರಡನ್ನೂ ಪ್ರಕಟಿಸಿದ್ದಾರೆ. ಅಸಲಿ ಫೋಟೋಗೆ ಮಾರ್ಫಿಂಗ್ ಮಾಡಿ ಐಶ್ವರ್ಯ ಫೋಟೋ ಎಂದು ಬಿಂಬಿಸಿರುವುದನ್ನು ಅವರು ಕಂಡುಹಿಡಿದಿದ್ದಾರೆ.

ಲೇಡೀಸ್ ಅಂಡ್ ಜಂಟಲ್‌ಮನ್ ಐಶ್ವರ್ಯ ರೈ ನಕಲಿ ಫೋಟೋಗೆ ಸಂಬಂಧಿಸಿದ ಮಿಸ್ಟರಿಯನ್ನು ಭೇಧಿಸಿದ್ದೇನೆ ಎಂದು Bigb.bigadda.com ಹೇಳಿಕೊಂಡಿದ್ದಾರೆ. ಅಸಲಿ ಫೋಟೋವನ್ನು ಮಾರ್ಫಿಂಗ್ ಮಾಡಿದ ಬಳಿಕ ಅದನ್ನು ಇಂಟರ್‌ನೆಟ್‌ನಲ್ಲಿ ತೇಲಿಬಿಟ್ಟಿದ್ದಾರೆ. ಏನೇ ಆಗಲಿ ಅಸಲಿ ಕಳ್ಳಲು ಸಿಕ್ಕಿಬಿದ್ದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅದೆಲ್ಲಾ ಸರಿ ತಮ್ಮ ಮೊಮ್ಮಗಳ ಫೋಟೋ ಯಾವಾಗ ತೋರಿಸುತ್ತೀರಿ ಎಂದು ಅಭಿಮಾನಿಗಳು ಬಿಗ್‍ ಬಿಗೆ ದುಂಬಾಲು ಬಿದ್ದಿದ್ದಾರೆ. ಆದರೆ ಬಿಗ್ ಬಿ ಮಾತ್ರ ಇದಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಅಭಿಮಾನಿಗಳ ಆಸೆ ಅದ್ಯಾವಾಗ ನೆರವೇರುತ್ತದೋ ಏನೋ ಗೊತ್ತಿಲ್ಲ? ಏತನ್ಮಧ್ಯೆ ಐಶ್ವರ್ಯ ರೈ ಮಂಗಳವಾರ (ನ.22) ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಒಂಭತ್ತು ದಿನಗಳ ಪುರುಡು ಕಳೆದ ನಂತರ ಹತ್ತನೆಯ ದಿನ ಮಂಗಳಸ್ನಾನದ ವಿಧಿವಿಧಾನಗಳು ಪೂರ್ಣವಾಗಲಿವೆ. ಆ ನಂತರಷ್ಟೇ ಮುದ್ದುಮುಖದ ಕಂದನ ದರ್ಶನ ಮಾಡಿಸುವ ಸಾಧ್ಯತೆಗಳಿವೆ. ಬಂಟರ ಸಂಪ್ರದಾಯದ ಪ್ರಕಾರ ಹನ್ನೊಂದನೇ ದಿನ ಅಥವಾ ಮೂರು ತಿಂಗಳ ಒಳಗೆ ನಾಮಕರಣ ನಡೆಯಬೇಕು. ಆದರೆ ಬಚ್ಚನ್ ಕುಟುಂಬದಿಂದ ಈ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Amitabh Bachchan has thanked his extended family (EF) for finding the original morphed image of his new-born granddaughter's picture. Meanwhile Aishwarya Rai discharged from Mumbai Seven Hills hospital on Tuesday (Nov 22).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X