ಘಾಟ್ ಹತ್ತಿ ತಂಪೆರೆಯಲು ಬರುತ್ತಿದೆ 'ಬಿಸಿಲೆ'
'ಬಿಸಿಲೆ' ಹೀಗೊಂದು ಆಕರ್ಷಕ ಶೀರ್ಷಿಕೆ ಹೊಂದಿರುವ ಈ ಚಿತ್ರ ಕೌಟುಂಬಿಕ ಹಿನ್ನೆಲೆಯೊಂದಿಗೆ ಪ್ರೇಮ ಕಥಾವಸ್ತು ಹೊಂದಿದೆ. 'ಬಿಸಿಲೆ' ಘಾಟ್ ಮೂಲಕ ಪಿಕ್‌ನಿಕ್‌ಗೆ ಹೊರಟ ನಾಯಕ, ನಾಯಕಿ ದಾರಿಯ ಮಧ್ಯೆ ಟ್ರಕ್ಕಿಂಗ್‌ಗೆಂದು ಹೊರಟು ದಾರಿ ತಪ್ಪಿಸಿಕೊಂಡು ಏನೆಲ್ಲಾ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಹಾಗೂ ಅವರಿಬ್ಬರ ಮಧ್ಯೆ ಹೇಗೆ ಪ್ರೇಮ ಅಂಕುರಿಸುತ್ತದೆ ಎಂಬುದೇ 'ಬಿಸಿಲೆ' ಚಿತ್ರದ ಕಥಾ ಹಂದರ.
ಸದಭಿರುಚಿಯ ನಿರ್ಮಾಪಕರು ಹಾಗೂ ನಿರ್ದೇಶಕರುಗಳಿಂದ ಮೂಡಿಬಂದಿರುವ ಈ ಚಿತ್ರ ನೋಡುಗರ ಮನಸ್ಸನ್ನು ಗಟ್ಟಿಯಾಗಿ ಸೆಳೆಯುತ್ತದೆ ಎಂಬುದು 'ಬಿಸಿಲೆ' ತಂಡದ ನಂಬುಗೆಯಾಗಿದೆ. ಈ ವಾರ ತೆರೆಕಾಣುತ್ತಿರುವ ಈ ಚಿತ್ರಕ್ಕೆ ಮಾಧ್ಯಮದ ಮಿತ್ರರು ತುಂಬು ಹೃದಯದಿಂದ ಸಹಕರಿಸಬೇಕಾಗಿ ವಿನಂತಿ.
ಚಿತ್ರದಲ್ಲಿ ದಿಗಂತ್, ಜೆನ್ನಿಫರ್ ಕೊತ್ವಾಲ್, ದ್ವಾರಕೀಶ್, ಚಿತ್ರಾ ಶೆಣೈ, ಸುನೇತ್ರ ಪಂಡಿತ್, ಲಕ್ಷ್ಮೀದೇವಿ. ಉಮೇಶ್, ದಿ.ಮೈನಾ ಚಂದ್ರು, ನಮ್ರತಾ ಮುಂತಾದವರು ಅಭಿನಯಿಸಿದ್ದಾರೆ. ಕಥೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನ ಸಂದೀಪ್ ಎಸ್ ಗೌಡ. ನಿರ್ಮಾಪಕರು ಕಿರಣ್ ಪಿ. ರೆಡ್ಡಿ, ಚಂದ್ರು ಟಿ. ಗೌಡ. ನಿರಂಜನ್ ಬಾಬು ಅವರ ಛಾಯಾಗ್ರಹಣ, ಗಗನ್ ಬಟೇರಿಯಾ, ರಿಷಿಕೇಶ್ ಹರಿ ಸಂಗೀತ ಹಾಗೂ ಸಂಕಲನ ಶವರಾಜ್ ಮೇಹೂ.


Click it and Unblock the Notifications











