ಸನ್ ಆಫ್ ಮುದ್ದೇಗೌಡ ಚಿತ್ರಕ್ಕೆ ನಾಯಕಿ ಚಾರ್ಮಿ ಕೌರ್
ಬರೋಬ್ಬರಿ ಐದು ವರ್ಷಗಳ ಬಳಿಕ ತುಂಬುಗೆನ್ನೆ ನಟಿ ಚಾರ್ಮಿ ಕೌರ್ ಕನ್ನಡಕ್ಕೆ ಮರಳಿದ್ದಾರೆ. ಈ ಹಿಂದೆ ಆಕೆ ಉಪೇಂದ್ರ, ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದ ಲವ ಕುಶ ಚಿತ್ರದಲ್ಲಿ ಅಭಿನಯಿದ್ದರು. ಈಗ ಮತ್ತೊಮ್ಮೆ ಆಕೆಯನ್ನು ಕನ್ನಡಕ್ಕೆ ಕರೆತರುತ್ತಿದ್ದಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್.
ಡಿಂಪಲ್ ಸ್ಟಾರ್ ದಿಗಂತ್ ನಾಯಕ ನಟನಾಗಿರುವ ಈ ಚಿತ್ರದ ಶೀರ್ಷಿಕೆ ದೇವ್ ಸನ್ ಆಫ್ ಮುದ್ದೇಗೌಡ. ಹದಿನಾರನೇ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ತಾರೆ ಚಾರ್ಮಿ. ಈಗ ಆಕೆಯ ವಯಸ್ಸು ಇಪ್ಪತ್ತೊಂಬತ್ತು ವರ್ಷ.
ಈ ಹಿಂದೆ ಇಂದ್ರಜಿತ್ ಲಂಕೇಶ್ ನಿರ್ದೇಶನದ ಹುಡುಗ ಹುಡುಗಿ ನಿರೀಕ್ಷಿಸಿದ ಮಟ್ಟಿಗೆ ಯಶಸ್ವಿಯಾಗಲಿಲ್ಲ. ಈಗ ಅಭಿನಯಕ್ಕೆ ಒತ್ತು ನೀಡುವ ಚಿತ್ರಕತೆಯನ್ನು ಕೈಗೆತ್ತಿಕೊಂಡಿದ್ದಾರೆ. ದಿಗಂತ್ ಜೊತೆ ಇದುವರೆಗೂ ಅಭಿನಯಿಸದ ತಾರೆಯನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿರುವುದು ವಿಶೇಷ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Indrajith Lankesh's latest movie Dev, Son of Mudde Gowda launched recently. After a gap of five years, Charmy Kaur is returning to Kannada films. The actress will be teamed up with Diganth.


Click it and Unblock the Notifications











