ದರ್ಶನ್ ಚಿಂಗಾರಿ ಬಿಡುಗಡೆಗೆ ಜ್ಯೋತಿಷ್ಯದ ಮೊರೆ

By Rajendra

ನಟ ದರ್ಶನ್ ಮುಂದಿನ ಚಿತ್ರ 'ಚಿಂಗಾರಿ' ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ದಿನಾಂಕವನ್ನು ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಫಿಕ್ಸ್ ಮಾಡಲಾಗಿದೆಯಂತೆ. ಜನವರಿ 26ರಂದು ರಾಷ್ಟ್ರೀಯ ರಜೆ. ಹಾಗಿದ್ದರೂ ಜ್ಯೋತಿಷಿಯೊಬ್ಬರ ಸೂಚನೆ ಮೇರೆಗೆ ಚಿತ್ರವನ್ನು ಜನವರಿ 27ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎನ್ನುತ್ತವೆ ಮೂಲಗಳು.

ಬೆಂಗಳೂರಿನ ಮಾಡೆಲ್ ದೀಪಿಕಾ ಕಾಮಯ್ಯ ಚಿತ್ರದ ನಾಯಕಿ. ಹರ್ಷ ನಿರ್ದೇಶನದ ಈ ಚಿತ್ರದಲ್ಲಿ ಭಾವನಾ ವಿಶೇಷ ಪಾತ್ರವನ್ನು ನಿರ್ವಹಿಸಿದ್ದಾರೆ. ಯಶಸ್ ಸೂರ್ಯ, ಸೃಜನ್ ಲೋಕೇಶ್ ಹಾಗೂ ಪ್ರದೀಪ್ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಹರಿಕೃಷ್ಣ ಸಂಗೀತ ಹಾಗೂ ಎಚ್ ಸಿ ವೇಣು ಛಾಯಾಗ್ರಹಣ ಚಿತ್ರಕ್ಕಿದೆ.

ಯೋಗರಾಜ್ ಭಟ್ ಸಾಹಿತ್ಯದಲ್ಲಿ ಒಂದು ಹಾಡು ಮೂಡಿಬಂದಿದ್ದು ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಜಯಂತ್ ಕಾಯ್ಕಿಣಿ, ಕವಿರಾಜ್ ಅವರ ಗೀತಸಾಹಿತ್ಯ ಚಿತ್ರಕ್ಕಿದೆ. ಜನವರಿ 1 ಅಥವಾ 2ರಂದು ಆಡಿಯೋ ಬಿಡುಗಡೆಯಾಗಲಿದೆ. ಚಿತ್ರದ ಬಹುತೇಕ ಚಿತ್ರೀಕರಣ ಸ್ವಿಟ್ಜರ್‌ಲ್ಯಾಂಡ್ ಹಾಗೂ ಝೂರಿಚ್‌ನಲ್ಲಿ ನಡೆಯಲಿದೆ. (ಏಜೆನ್ಸೀಸ್)

More from Filmibeat

English summary
Challenging Star’s forthcoming movie Chingaari to be released on January 27. Bangalore model Deepika Kamaiah is the heroine of this film. Dace director turned director Harsha is the director of the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X