ಧೂದ್ ಪೇಡಾ ದಿಗಂತ್ ಈಗ ಜಾಲಿಬಾಯ್
ಕನ್ನಡ ಚಿತ್ರರಂಗದಲ್ಲಿ ಸದಾ ಜಾಲಿಯಾಗಿರುವ ನಟರಲ್ಲಿ ದಿಗಂತ್ ಸಹ ಒಬ್ಬರು. ಅವರ ಗುಣ ವಿಶೇಷಕ್ಕೆ ತಕ್ಕಂತಹ ಚಿತ್ರವೊಂದರಲ್ಲಿ ನಟಿಸುವ ಅವಕಾಶ ದಿಗಂತ್ ಸಿಕ್ಕಿದೆ. ದಿಗಂತ್ ನಟಿಸಲಿರುವ ಹೊಸ ಚಿತ್ರದ ಹೆಸರು 'ಜಾಲಿಬಾಯ್'! ದಿಗಂತ್ ಈಗಾಗಲೆ ಪಾನಿಪೂರಿ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.
ಜಾಲಿ ಬಾಯ್ ಚಿತ್ರಕ್ಕೆ ಕೆ ಮಂಜು ನಿರ್ಮಾಪಕರು. ಚಿತ್ರದ ಹೆಸರೆ ಹೇಳುವಂತೆ ಇದೊಂದು ಹಾಸ್ಯ ಮಿಶ್ರಿತ ಪ್ರೇಮಕಥೆ. ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಸಭಾಪತಿ ದಕ್ಷಿಣಾಮೂರ್ತಿ. ಕತೆ, ಚಿತ್ರಕತೆ ಸಹ ಅವರೇ ಹೆಣೆದಿದ್ದಾರೆ. 'ಹುಡುಗಾಟ'ದ ಹುಡುಗಿ ರೇಖಾ ಚಿತ್ರದ ನಾಯಕಿ.
ಅಂದಹಾಗೆ ದಕ್ಷಿಣಾಮೂರ್ತಿ ಅವರು ಈ ಹಿಂದೆ ತಮಿಳಿನಲ್ಲಿ ಕೆಲವು ಚಿತ್ರಗಳನ್ನು ಮಾಡಿದ್ದರು. ಚಿತ್ರದ ಉಳಿದ ತಾರಾಬಳಗದಲ್ಲಿ ದೇವರಾಜ್ ಹಾಗೂ ತಾರಾ ಸಹ ಕಾಣಿಸುತ್ತಾರೆ. ಬೆಂಗಳೂರು, ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯಲಿದೆ. ಶಿವಶಂಕರ್ ಅವರ ಸಂಗೀತ ಚಿತ್ರಕ್ಕಿರುತ್ತದೆ. ಪ್ರೇಕ್ಷಕನಿಗೆ ಚಿತ್ರ ಎಲ್ಲೂ ಬೋರೊಡೆಸದೆ ಜಾಲಿಯಾಗಿ ಸಾಗುತ್ತದೆ ಎಂಬುದು ಮಂಜು ಅವರ ಒಕ್ಕಣೆ.


Click it and Unblock the Notifications











