ಇವಳೆಂಥ ಬ್ಯೂಟಿನೋ ಇವಳಿಗ್ಯಾರು ಸಾಟಿನೋ!
'ಎಂಗೇಜ್‌ಮೆಂಟ್' ಚಿತ್ರಕ್ಕೆ ನಂಜುಂಡಿ ರವರು ಬರೆದಿರುವ 'ಇವಳೆಂಥ ಬ್ಯೂಟಿನೋ ಇವಳಿಗ್ಯಾರು ಸಾಟಿನೋ ಬ್ರಹ್ಮ ಬಿಡಿಸಿದ ಸುಂದರಿ ಗೀತೆಯ ಚಿತ್ರೀಕರಣ ನಗರದ ರೇವಾ ಕಾಲೇಜಿನಲ್ಲಿ ನಡೆದಿದೆ. ಚಂದನ್ ಹಾಗೂ ಆಶಾ ಅಭಿನಯಿಸಿದ ಈ ಗೀತೆಗೆ ವಿಜಯನಗರ ಮಂಜು ನೃತ್ಯ ನಿರ್ದೇಶನ ಮಾಡಿದ್ದಾರೆ.
ಎಸ್.ಪಿ.ನಂಜುಂಡಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ರವರ ಸಂಗೀತವಿದೆ. ರೇಣುಕುಮಾರ್ ಛಾಯಾಗ್ರಹಣ, ದಾಮೋದರ್ ಸಂಕಲನ, ಶ್ರೀನಿವಾಸ್ ಕಲಾನಿರ್ದೆಶನ ಹಾಗೂ ದಾಡಿ ರಮೇಶ್ ನಿರ್ಮಾಣ ನಿರ್ವಹಣೆಯಿದೆ.
'ಎಂಗೇಜ್‌ಮೆಂಟ್' ಚಿತ್ರಕ್ಕಿದೆ. ಪ್ರಶಾಂತ್, ಆಶಾ, ಚಂದನ್, ರಾಮಕೃಷ್ಣ, ರಮೇಶ್‌ಭಟ್, ಬ್ಯಾಂಕ್‌ಜನಾರ್ದನ್, ಜ್ಯೋತಿ, ಮೈಕಲ್‌ಮಧು, ಕಿಲ್ಲರ್‌ವೆಂಕಟೇಶ್, ಸತ್ಯಜಿತ್, ಮಾಸ್ಟರ್ ಅಭಿಷೇಕ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಶ್ರೀಸತ್ಯನಾರಾಯಣ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಿದು.
ಪ್ರಶಾಂತ್ ಒರಟ ಎಂಗೇಜ್ ಮೆಂಟ್ ಎಸ್ ಪಿ ನಂಜುಂಡಿ ಒರಟ ಐ ಲವ್ ಯು ಆಶಾ ರಮೇಶ್ ಭಟ್ ನಿಶ್ಚಿತಾರ್ಥ prashanth engagement s p nanjundi asha ramesh bhat orata i love you


Click it and Unblock the Notifications