ಲೀಲಾವತಿ ತೋಟಕ್ಕೆ ಬೆಂಕಿಯಿಟ್ಟವ ಸಿಕ್ಕಿಬಿದ್ದ

'ಕಿಡಿ'ಗೇಡಿ: ಇದೀಗ ದುಃಖದ ಮಡುವಿನಲ್ಲಿದ್ದ ಅಮ್ಮ-ಮಗ ಜೋಡಿಗೆ ಮತ್ತು ಅವರ ಅಭಿಮಾನಿ ದೇವರುಗಳಿಗೆ ಒಂದಷ್ಟು ಸಮಾಧಾನ ತರುವಂತಹ ಸುದ್ದಿಯೊಂದು ಬಂದಿದೆ. ಲೀಲಾವತಿ ತೋಟಕ್ಕೆ ಬೆಂಕಿಹಚ್ಚುತ್ತಿದ್ದ ದುರುಳ ಪತ್ತೆಯಾಗಿದ್ದು, ಅವನನ್ನು ಮಂಜುನಾಥ ಎಂದು ಗುರುತಿಸಲಾಗಿದೆ. ಇವ ಮೈಲನಹಳ್ಳಿ ನಿವಾಸಿ. ಇವ ಬೇರಾರು ಅಲ್ಲ. ಲೀಲಾವತಿ ತೋಟದ ಪಕ್ಕದಲ್ಲೇ ಇರುವ ತೋಟದ ಮಾಲೀಕ.
ಕಳೆದ ವಾರ ತಮ್ಮ ತೋಟಕ್ಕೆ ಬೆಂಕಿ ಬೀಳುತ್ತಿದ್ದಂತೆ ವಿನೋದ್ ರಾಜ್ ಥೇಟ್ ಸಿನಿ ಶೈಲಿಯಲ್ಲಿ ಕಣಕ್ಕಿಳಿದಿದ್ದರು. 'ಕಿಡಿ'ಗೇಡಿಯನ್ನು ಹಿಡಿಯಲು ಮುಂದಾದ ವಿನೋದ್ ರಾಜ್ ಕೈಗೆ ಸಿಕ್ಕಿಬಿದ್ದಿದ್ದು ಮಂಜುನಾಥ. ತಕ್ಷಣ ಆತನನ್ನು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಮಂಜುನಾಥನನ್ನು ಈಗ ವಿಚಾರಿಸುತ್ತಿದ್ದಾರೆ.
More from Filmibeat
English summary
Kannada actor Vinod Raj, son of veteran actress Leelavathi, has finally nabbed the man who had been setting fire to his mother’s farm house at Sooladevanahalli in Nelamangala.The accused has been identified as Manjunath, a resident of Mylanahalli. Manjunath is said to be the owner of the neighbouring farm.


Click it and Unblock the Notifications











