ಭರ್ಜರಿ ಸಾಹಸದತ್ತ ಮುನ್ನುಗ್ಗಿದ'ರಾಧ'
ವಿಜಯ ರಾಘವೇಂದ್ರ ನಾಯಕ ನಟನಾಗಿ ಅಭಿನಯಿಸಿರುವ 'ರಾಧ' ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಐದು ಹಾಡುಗಳ ಹಾಗೂ ಒಂದು ಭರ್ಜರಿ ಸಾಹಸ ಸನ್ನಿವೇಶದ ಚಿತ್ರೀಕರಣ ಬಾಕಿಯಿದೆ.ಈ ಚಿತ್ರವನ್ನು ಜಿ ಎಲ್ ಕೆ ಫಿಲಂಸ್ ಲಾಂಛನದಲ್ಲಿ ರವಿಕಮಲ್ ಹಾಗೂ ಶ್ರೀಧರ್ ನಿರ್ಮಿಸುತ್ತಿದ್ದಾರೆ.
ಚಿತ್ರದ ಪ್ರಮುಖ ಆಕರ್ಷಣೆಗಳಲ್ಲೊಂದಾಗಿರುವ ಈ ಸಾಹಸ ಸನ್ನಿವೇಶದ ಚಿತ್ರೀಕರಣಕ್ಕಾಗಿ ಬೆಂಗಳೂರಿನಲ್ಲಿ ವಿಶೇಷ ಸೆಟ್ ನಿರ್ಮಾಣವಾಗುತ್ತಿದೆ. ಹಾಡುಗಳ ಚಿತ್ರೀಕರಣಕ್ಕೆ ಈ ತಿಂಗಳ ಅಂತ್ಯದಲ್ಲಿ ಚಾಲನೆ ದೊರಕಲಿದ್ದು, ಶ್ರೀಕಂಠೀರವ ಸ್ಟುಡಿಯೋ, ನಗರದ ರಸ್ತೆಗಳು ಹಾಗೂ ನಂದಿಗ್ರಾಮದಲ್ಲಿ ಚಿತ್ರೀಕರಣಗೊಳ್ಳಲಿದೆ ಎಂದು ನಿರ್ದೇಶಕ ಹರಿಕಿರಣ್ ತಿಳಿಸಿದ್ದಾರೆ.
ರವಿಅಲಾರ ಸಂಗೀತವಿರುವ ಈ ಚಿತ್ರಕ್ಕೆ ಸತ್ಯಬಾಬು ಅವರ ಛಾಯಾಗ್ರಹಣವಿದೆ, ಬಾಬು ಸಂಕಲನ, ಮುರಳಿ ಸಂಭಾಷಣೆ ಹಾಗೂ ಡಿಫ಼ರೆಂಟ್‌ಡ್ಯಾನಿ ಸಾಹಸವಿರುವ ಚಿತ್ರದ ತಾರಾಬಳಗದಲ್ಲಿ ವಿಜಯರಾಘವೇಂದ್ರ, ಶೇಖರ್, ಮಧುವಿಕಾ, ವಿಜಯರಂಗರಾಜು, ನಟರಾಜ್, ಎಂ.ಎಸ್.ನಾರಾಯಣ್, ಜಯಪ್ರಕಾಶ್‌ರೆಡ್ಡಿ, ಭವ್ಯ, ಸವಿತಾಕೃಷ್ಣಮೂರ್ತಿ ನಕುಲ್‌ಬಾಲಚಂದರ್, ಸುನೀಲ್ ಬೀರೂರ್ ಮುಂತಾದವರಿದ್ದಾರೆ.


Click it and Unblock the Notifications











