»   » ಏ. 25ಕ್ಕೆ ಗೋಲ್ಡನ್ ಸ್ಟಾರ್ ಗಣೇಶನ ಅರಮನೆ ಪ್ರವೇಶ

ಏ. 25ಕ್ಕೆ ಗೋಲ್ಡನ್ ಸ್ಟಾರ್ ಗಣೇಶನ ಅರಮನೆ ಪ್ರವೇಶ

Posted By:
Subscribe to Filmibeat Kannada

ಒಂದರ ಹಿಂದೊಂದು ಹಿಟ್ ಚಿತ್ರಗಳನ್ನು ನೀಡುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ ಅವರ ಮತ್ತೊಂದು ಚಿತ್ರ ಅರಮನೆ ಇದೇ ಶುಕ್ರವಾರ(ಏ.25) ತೆರೆ ಕಾಣಲಿದೆ. ಗಣೇಶ ಇತ್ತೀಚೆಗೆ ನಟಿಸಿದ ಎಲ್ಲ ಚಿತ್ರಗಳು ಬಾಕ್ಸಾಫೀಸ್ ನ್ನು ಕೊಳ್ಳೆ ಹೊಡೆದಿರುವುದರಿಂದ ಅರಮನೆ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಡಲಾಗಿದೆ.

ಅರಮನೆ ಚಿತ್ರವನ್ನು ಲಕ್ಷ್ಮೀಶ್ರೀ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಪಕ ಗಂಡುಗಲಿ ಕೆ.ಮಂಜು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರಮನೆ ಚಿತ್ರವನ್ನು ಗಣೇಶ್ ಅವರ ಗೆಳೆಯ ನಾಗಶೇಖರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಏಳು ವಿವಿಧ ವೇಷದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದ ಅವರು, ಅರಮನೆ ಚಿತ್ರ ಸಕುಟುಂಬ ಪರಿವಾರದೊಡನೆ ಕುಳಿತು ನೋಡುವಂತ ಚಿತ್ರ ಎಂದು ಅವರು ಹೇಳಿದರು.ಈ ಚಿತ್ರದಲ್ಲಿ ನಾಯಕನಟ ಗಣೇಶ ಛಾಯಚಿತ್ರಕಾರನಾಗಿ ಕೆಲಸ ಮಾಡುವ ಪಾತ್ರವಿದ್ದು, ಎಲ್ಲರಿಗೂ ಇಷ್ಟವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದ ಸೋಲಿನಿಂದ ಕಂಗೆಟ್ಟಿರುವ ನಿರ್ಮಾಪಕ ಕೆ.ಮಂಜು ಅವರಿಗೆ ಅರಮನೆ ಯಶಸ್ಸು ತಂದುಕೊಡಲಿದೆಯಾ ಎನ್ನುವುದು ಚಿತ್ರ ಬಿಡುಗಡೆಯಾದ ನಂತರ ಗೊತ್ತಾಗಲಿದೆ.ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಲಿದ್ದು, ಶೇಖರ್ ಚಂದ್ರು ಕ್ಯಾಮರಾಮನ್ ಆಗಿ ಕೆಲಸ ಮಾಡಿದ್ದಾರೆ. ನಟಿ ರೋಮಾ, ಹಿರಿಯ ನಟ ಅನಂತನಾಗ್, ತಾರಾ, ತೇಜಸ್ವಿನಿ, ಸುಧೀರ್ ರಾಜು, ಮತ್ತಿತರರು ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada