For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಸ್ಟಾರ್ ಜೊತೆ ಸಕ್ಕರೆ ಹಂಚಿಕೊಂಡ ರಾಧಿಕಾ

  By Rajendra
  |

  ಯುಗಾದಿ ಹಬ್ಬಕ್ಕೆ ಮುನ್ನವೇ ಗೋಲ್ಡನ್ ಸ್ಟಾರ್ ಗಣೇಶ್ ಸಕ್ಕರೆ ಸುದ್ದಿ ಕೊಟ್ಟಿದ್ದಾರೆ. ಈ ಬಾರಿ ಅವರು ಸಿಹಿ ಹಂಚಿಕೊಳ್ಳುತ್ತಿರುವುದು ಪ್ರತಿಭಾನ್ವಿತ ತಾರೆ ರಾಧಿಕಾ ಪಂಡಿತ್ ಜೊತೆ. ಬಿ ಸುರೇಶ್ ನಿರ್ದೇಶಿಸಲಿರುವ ಚಿತ್ರಕ್ಕೆ ಸದ್ಯಕ್ಕೆ ಸಕ್ಕರೆ ಎಂದು ಹೆಸರಿಡಲಾಗಿದೆ. ಈ ಶೀರ್ಷಿಕೆ ಬದಲಾದರೂ ಆಗಬಹುದು.

  ಯೋಗರಾಜ್ ಭಟ್ ಅವರ ಡ್ರಾಮಾ ಚಿತ್ರದಲ್ಲಿ ಬಿಜಿಯಾಗಿರುವ ರಾಧಿಕಾ ಪಂಡಿತ್ ಅದಾದ ಬಳಿಕಷ್ಟೇ ಸಕ್ಕರೆ ಮೆಲ್ಲಲಿದ್ದಾರೆ. ಸದ್ಯಕ್ಕೆ ಡ್ರಾಮಾ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗಿದೆ. ಅಂದಹಾಗೆ ಸಕ್ಕರೆ ಚಿತ್ರದ ಕತೆ ಚಿತ್ರಕತೆ ಅಭಯ್ ಸಿಂಹ ಅವರದು.

  ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಎಲ್ಲವನ್ನೂ ಯೋಗರಾಜ್ ಭಟ್ ಬರೆದಿರುವುದು ವಿಶೇಷ. ವಿ ಹರಿಕೃಷ್ಣ ಅವರ ಸಂಗೀತವಿರುವ ಚಿತ್ರ ಮೇ.14ರಂದು ಸೆಟ್ಟೇರಲಿದೆ. ಒಟ್ಟಿನಲ್ಲಿ ಗೋಲ್ಡನ್ ಸ್ಟಾರ್‌ಗೆ ಒಳ್ಳೆಯ ತಾಂತ್ರಿಕ ಬಳಗದ ಜೊತೆ ಕೆಲಸ ಮಾಡುವ ಚಾನ್ಸ್ ಸಿಕ್ಕಿದೆ. (ಏಜೆನ್ಸೀಸ್)

  English summary
  Golden star Ganesh new movie titled as Sakkare, which will be directed by B Suresh. Actress Radhika Pandit has been chosen to play the heroine’s role in the film. Hari Krishna is the music director of the film for which all the five songs are written by Yogaraj Bhat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X