ಶಿಕಾರಿ ಕೈತಪ್ಪಿದ್ದಕ್ಕೆ ಶಾನೆ ಬೇಜಾರಾದ ಹರಿಪ್ರಿಯಾ
ತಮಿಳು, ತೆಲುಗು ಚಿತ್ರರಂಗದಲ್ಲಿ ಪುರುಸೋತ್ತಿಲ್ಲದಂತೆ ನಟಿಸುತ್ತಿರುವ ಹರಿಪ್ರಿಯಾ ಶಾನೆ ಬೇಜಾರು ಮಾಡಿಕೊಂಡಿದ್ದಾರೆ. ಮಲಯಾಳಂ ನಟ ಮಮ್ಮೂಟ್ಟಿ ಜೊತೆ 'ಶಿಕಾರಿ' ಚಿತ್ರದಲ್ಲಿ ನಟಿಸುವ ಅವಕಾಶ ಕೈತಪ್ಪಿರುವುದೇ ಈ ಪಶ್ಚಾತ್ತಾಪ ಕಾರಣವಂತೆ.
ಹರಿಪ್ರಿಯಾಗೆ ಡೇಟ್ಸ್ ಸಿಗದ ಕಾರಣ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಅಭಯ ಸಿಂಹ ನಿರ್ದೇಶಿಸುತ್ತಿರುವ 'ಶಿಕಾರಿ'ಯಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲವಂತೆ. ಸದ್ಯಕ್ಕೆ ತಮಿಳಿನಲ್ಲಿ ಚೇರನ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಶಿಕಾರಿ ಚಿತ್ರ ಹಾಗೂ ಚೇರನ್ ಚಿತ್ರದ ಡೇಟ್ಸ್ ಸರಿಹೊಂದಾಣಿಕೆಯಾಗಾ ಕಾರಣ ಶಿಕಾರಿಯನ್ನು ಕೈಬಿಡಬೇಕಾಗಿದೆ.
ಅಭಯ ಸಿಂಹ ಅವರ ಸ್ಕ್ರಿಪ್ಟ್ ಇಷ್ಟವಾಗಿತ್ತು. ಮಮ್ಮೂಟ್ಟಿ ಅವರು ಚಿತ್ರದಲ್ಲಿ ಅಭಿನಯಿಸುತ್ತಿರುವುದು ಚಿತ್ರಕ್ಕೆ ಹೊಸ ಕಳೆ ಬಂದಿತ್ತು. ಆದರೆ ಏನು ಮಾಡುವುದು ಶಿಕಾರಿಗೆ ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ ಎಂದಿದ್ದಾರೆ. ಮುಂದೊಂದು ದಿನವಾದರೂ ಮಮ್ಮುಟ್ಟಿ ಜೊತೆ ನಟಿಸುವ ಅವಕಾಶ ಸಿಗಲಿ ಎಂದು ಹರಿಪ್ರಿಯಾ ಹರಕೆ ಹೊತ್ತಿದ್ದಾರೆ.
ಮಲಯಾಳಂನಲ್ಲಿ ಮಮ್ಮುಟ್ಟಿ ಜೊತೆ ನಟಿಸಬೇಕು ಎಂಬುದು ಹರಿಪ್ರಿಯಾ ಹಂಬಲ. ಸದ್ಯಕ್ಕೆ ಈ ಪ್ರಯತ್ನದಲ್ಲಿರುವ ಹರಿಪ್ರಿಯಾ ಮಲಯಾಳಂ ಚಿತ್ರರಂಗದೊಂದಿಗೆ ಮಾತುಕತೆ ನಡೆಸುತ್ತಿದ್ದಾರಂತೆ. ಏತನ್ಮಧ್ಯೆ ಕನ್ನಡದಲ್ಲಿ ಒಪ್ಪಿಕೊಂಡಿದ್ದ ಶ್ರೀಮುರಳಿ ಜೊತೆಗಿನ 'ನಾನೇ' ಚಿತ್ರದ ಚಿತ್ರೀಕರಣ ಮುಗಿದಿದೆ. ಉಳಿದಂತೆ ಯಾವುದೇ ಹೊಸ ಚಿತ್ರಕ್ಕೆ ಹರಿಪ್ರಿಯಾ ಸಹಿಹಾಕಿಲ್ಲವಂತೆ. ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿದ ಬಳಿಕವಷ್ಟೆ ಮುಂದಿನ ನಿರ್ಧಾರ ಎನ್ನುತ್ತಾರೆ.


Click it and Unblock the Notifications











