ಅದ್ವೈತ ಅಜಯ್‌ಗೆ ಜತೆಯಾದ ಹರ್ಷಿಕಾ ಪೂಣಚ್ಚ

By Rajendra

ಕನ್ನಡ ಚಿತ್ರರಂಗಕ್ಕೆ ಸಿಕ್ಕ ಹೊಸ ತಂಗಿ ಹರ್ಷಿಕಾ ಪೂಣಚ್ಚ. ಈಗ ಈಕೆಗೆ ತಂಗಿಯ ಪಾತ್ರಗಳ ಜೊತೆಜೊತೆಗೆ ನಾಯಕಿ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ. ಅಂಥಹದ್ದೇ ಒಂದು ಚಿತ್ರ ಈಗ ಅಜಯ್ ರಾವ್ ಜತೆ ಸಿಕ್ಕಿದೆ.ಚಿತ್ರದಹೆಸರು ಅದ್ವೈತ. ಹರ್ಷಿಕಾ ಅವರಿಗೆ ಇದು ಪೂರ್ಣ ಪ್ರಮಾಣದ ನಾಯಕಿ ಪಾತ್ರ.

ಈ ಚಿತ್ರವನ್ನು 'ಎಕ್ಸ್‌ಕ್ಯೂಸ್‌ಮಿ' ಹಾಗೂ 'ಚೆಲುವೆಯೇ ನಿನ್ನೇ ನೋಡಲು' ಚಿತ್ರಗಳ ಸರದಾರ ಎನ್ ಎಂ ಸುರೇಶ್ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಹರ್ಷಿಕಾ ಪೂಣಚ್ಚ ಅವರಿಗೆ ಸಖತ್ ಖುಷಿಯಾಗಿದೆಯಂತೆ. ಗಿರಿಧರ್ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.

ಹರ್ಷಿಕಾ ಪೂಣಚ್ಚ ಇತ್ತೀಚೆಗೆ ತೆರಕಂಡ '5 ಈಡಿಯಟ್ಸ್' ಚಿತ್ರದಲ್ಲಿ ಅಭಿನಯಿಸಿದ್ದರು.ಆದರೆ ಈ ಚಿತ್ರಕ್ಕೆ ರೆಸ್ಪಾನ್ಸ್ ಮಾತ್ರ ಅಷ್ಟಕ್ಕಷ್ಟೆ. ಪುನೀತ್ ರಾಜ್ ಕುಮಾರ್ ಜತೆ 'ಜಾಕಿ' ಹಾಗೂ ಶಿವರಾಜ್ ಕುಮಾರ್ ಅವರ 'ತಮಸ್ಸು' ಚಿತ್ರಗಳಲ್ಲಿ ತಂಗಿಯಾಗಿ ಹರ್ಷಿಕಾ ಪೂಣಚ್ಛ ಗಮನಸೆಳೆಯುವ ಪಾತ್ರಗಳಲ್ಲಿ ಮಿಂಚಿದ್ದರು.

More from Filmibeat

English summary
Actress Harshika Ponnacha to act with Ajay Rao in the movie Advaitha produced by NM Suresh. Previously N M Suresh produced excuse me, cheluveye ninna nodalu n so on. Harshika has expressed joy for acting in this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X