ಮಮ್ಮುಟ್ಟಿ, ಮೋಹನ್ ಲಾಲ್ ಮನೆಗಳ ಮೇಲೆ ಐಟಿ ದಾಳಿ

By Rajendra

I-T raids on Mammootty, Mohanlal
ಮಲಯಾಳಂ ಚಿತ್ರರಂಗದ ಜನಪ್ರಿಯ ತಾರೆಗಳಾದ ಮೋಹನ್ ಲಾಲ್ ಹಾಗೂ ಮಮ್ಮುಟ್ಟಿ ನಿವಾಸ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಬೆಂಗಳೂರು, ಕೊಚ್ಚಿ ಹಾಗೂ ಚೆನ್ನೈನಲ್ಲಿನ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಆದಾಯ ತೆರಿಗೆಯ ಏಳು ಮಂದಿ ತಂಡ ಏಕಕಾಲಕ್ಕೆ ಈ ನಟರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಕಾಗದ ಪತ್ರಗಳನ್ನು ಪರಿಶೀಲಿಸುತ್ತಿದೆ. ಈ ನಟರು ಸೂಕ್ತ ತೆರಿಗೆ ಪಾವತಿಸಿಲ್ಲ ಎಂಬ ಅನುಮಾನದ ಮೇಲೆ ಐಟಿ ರೇಡ್ ನಡೆದಿದೆ.

ಮೋಹನ್ ಲಾಲ್ ಒಡೆತನದಲ್ಲಿ ಕೆಲವು ದೊಡ್ಡ ಸಂಸ್ಥೆಗಳು ಇವೆ. ಮ್ಯಾಕ್ಸ್‌ಲ್ಯಾಬ್ ಸಿನಿಮಾಸ್ ಹಾಗೂ ಎಂಟರ್‌ಟೈನ್‌ಮೆಂಟ್ಸ್ ಎಂಬ ಚಿತ್ರ ವಿತರಣ ಸಂಸ್ಥೆ, ವಿಸ್ಮಯ ಮ್ಯಾಕ್ಸ್ ಎಂಬ ಪೋಸ್ಟ್ ಪ್ರೊಡಕ್ಷನ್ ಸ್ಟುಡಿಯೋ ಕೂಡ ಹೊಂದಿದ್ದಾರೆ. ಪ್ರಣವ್ ಆರ್ಟ್ಸ್ ಎಂಬ ಬ್ಯಾನರಿನಡಿ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ ಮೋಹನ್ ಲಾಲ್.

ದುಬೈ, ಕೊಚ್ಚಿ ಹಾಗೂ ಬೆಂಗಳೂರಿನಲ್ಲಿ ರೆಸ್ಟೋರೆಂಟ್‌ಗಳನ್ನು ಮೋಹನ್ ಲಾಲ್ ಹೊಂದಿರುವುದು ಇವರ ಮೇಲೆ ಐಟಿ ಕಣ್ಣು ಬೀಳಲು ಕಾರಣವಾಗಿದೆ. ಇನ್ನು ಮಮ್ಮುಟ್ಟಿ ಅವರು ಪ್ಲೇಹೌಸ್ ಎಂಟರ್‌ಟೈನ್‌ಮೆಂಟ್ಸ್ ಎಂಬ ವಿತರಣ ಸಂಸ್ಥೆಯನ್ನು ಹೊಂದಿದ್ದು ಮಲಯಾಳಂನ ಕೈರಾಲಿ ಟಿವಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್)

More from Filmibeat

English summary
The income tax department is conducting raids at the offices and homes of south Indian stars Mohanlal and Mamootty. According to Times Now, the I-T raids are being conducted in Kochi, Bangalore and Chennai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X