twitter
    For Quick Alerts
    ALLOW NOTIFICATIONS  
    For Daily Alerts

    ರಜನಿಕಾಂತ್‌ಗೆ ಜಪಾನ್ ಪ್ರಧಾನಿ ನ್ಯಾಟೊ ಕಾನ್ ಆಹ್ವಾನ

    By Rajendra
    |

    ಜಪಾನ್ ಸುನಾಮಿ ಸಂತ್ರಸ್ತರಿಗಾಗಿ ನಟ ರಜನಿಕಾಂತ್ ಸಹಾಯ ಹಸ್ತ ಚಾಚಿದ್ದು ಗೊತ್ತೇ ಇದೆ. ಸುನಾಮಿ ವಿಪತ್ತಿನಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇತ್ತೀಚೆಗೆ ರಜನಿಕಾಂತ್ ಸಂತಾಪಸೂಚಕ ಸಭೆ ನಡೆಸಿದರು. ಆಗ ಅವರು ಮಾತನಾಡುತ್ತಾ, ಜಪಾನ್ ಪ್ರಧಾನಿ ನ್ಯಾಟೊ ಕಾನ್ ಅವರು ತಮ್ಮನ್ನು ಜಪಾನ್‌ಗೆ ಆಹ್ವಾನಿಸಿರುವುದಾಗಿ ತಿಳಿಸಿದ್ದಾರೆ.

    ಆದರೆ ರಜನಿಕಾಂತ್ ಜಪಾನ್‌ಗೆ ಭೇಟಿ ನೀಡುತ್ತಾರೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಜಪಾನ್‌ನಲ್ಲಿ ರಜನಿಕಾಂತ್ ಅವರಿಗೆ ಅಪಾರ ಅಭಿಮಾನಿಗಳಿದ್ದು ಅವರೆಲ್ಲಾ ಸೂಪರ್ ಸ್ಟಾರನ್ನು ಎದುರು ನೋಡುವಂತಾಗಿದೆ. ಏತನ್ಮಧ್ಯೆ ಸುನಾಮಿ ದಾಳಿಗೆ ತುತ್ತಾದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿ ಪತ್ರವೊಂದನ್ನು ಜಪಾನ್ ಪ್ರಧಾನಿಗೆ ಕಳುಹಿಸಲಾಗಿದೆ.

    ಸುನಾಮಿ ಸಂತ್ರಸ್ತರನ್ನು ರಕ್ಷಿಸಲು ರಜನಿ ಈಗಾಗಲೆ ಮುಂದಾಗಿದ್ದು ಚೆನ್ನೈನ ಕಚೇರಿಯಿಂದ ಜಪಾನಿಯರಿಗೆ ನೆರವು ನೀಡಲಿದ್ದಾರೆ. ಮನೆ ಮಠ ಕಳೆದುಕೊಂಡವರಿಗೆ ಸಹಾಯ ಮಾಡಲು ರಜನಿ ಚಿತ್ರೋದ್ಯಮದವನ್ನು ಮನವಿ ಮಾಡಿಕೊಂಡಿದ್ದಾರೆ. ತಮ್ಮದೇ ಆದ ಒಂದು ತಂಡ ರಚಿಸಿ ಅವರನ್ನು ಜಪಾನಿಗೆ ಕಳುಹಿಸಿಕೊಡುವ ಯೋಚನೆಯೂ ರಜನಿ ತಲೆಯಲ್ಲಿದೆ.

    English summary
    Actor Rajinikanth participated in the condolence meeting held for tsunami victims of Japan. In his condolence speech, Rajini told that the prime minister of Japan has invited him to visit Japan.
    Tuesday, March 22, 2011, 15:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X