ಮುಖ್ಯಮಂತ್ರಿ ಜಯಲಲಿತಾ ಪಾತ್ರದಲ್ಲಿ ಜಯಚಿತ್ರಾ

By Rajendra

ಡಾ.ರಾಜ್ ಅಪಹರಣ, 108 ದಿನಗಳ ಒತ್ತೆ, ಬಿಡುಗಡೆ, ಆನಂತರದ ಬೆಳವಣಿಗೆಗಳು ಹಾಗೂ ವೀರಪ್ಪನ್ ಕೇಂದ್ರಬಿಂದುವಾಗಿ ಎಎಂಆರ್ ರಮೇಶ್ ಕೈಗೆತ್ತಿಕೊಂಡಿರುವ ಚಿತ್ರ 'ಅಟ್ಟಹಾಸ'. ಈ ಚಿತ್ರದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಪಾತ್ರವನ್ನು ಖ್ಯಾತ ಅಭಿನೇತ್ರಿ ಜಯಚಿತ್ರಾ ಅವರು ಪೋಷಿಸಲಿದ್ದಾರೆ.

'ಅಟ್ಟಹಾಸ' ಚಿತ್ರದಲ್ಲಿ ನಟಿಸಲು ಜಯಚಿತ್ರಾ ಅವರು ಈಗಾಗಲೆ ಒಪ್ಪಿಗೆ ನೀಡಿರುವುದಾಗಿ ಎಎಂಆರ್ ರಮೇಶ್ ಖಚಿತಪಡಿಸಿದ್ದಾರೆ. ಜಯಚಿತ್ರಾ ಅವರಿಗೂ ಜಯಲಲಿತಾ ಅವರಿಗೂ ನೋಡಲು ಸಾಮ್ಯತೆ ಇದ್ದು ಇಬ್ಬರೂ ಅಕ್ಕತಂಗಿಯರಂತೆ ಕಾಣುತ್ತಾರೆ. ಹುಲಿಯ ಹಾಲಿನ ಮೇವು, ಮನೆ ಮನೆ ಕತೆ ಚಿತ್ರಗಳಲ್ಲಿ ಜಯಚಿತ್ರಾ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ವೀರಪ್ಪನ್ ಆಗಿ ಕಿಶೋರ್ ಕಾಣಿಸಲಿದ್ದು, ಅಣ್ಣಾವ್ರ ಪಾತ್ರವನ್ನು ಸುರೇಶ್ ಒಬೆರಾಯ್ ಪೋಷಿಸಲಿದ್ದಾರೆ. ಇದೊಂದು ದ್ವಿಭಾಷಾ ಚಿತ್ರವಾಗಿದ್ದು ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಿಸಲಾಗುತ್ತಿದೆ. ತಮಿಳಿನಲ್ಲಿ ಈ ಚಿತ್ರಕ್ಕೆ 'ವನ ಯುದ್ಧಂ' ಎಂದು ಹೆಸರಿಡಲಾಗಿದೆ. ಎಸ್‌ಟಿಎಫ್ ಮುಖ್ಯಸ್ಥ ವಿಜಯ್ ಕುಮಾರ್ ಪಾತ್ರದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪಾತ್ರ ಪೋಷಣೆ ಮಾಡಲಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Renowned actress Jayachitra to do Jayalalitha role in bilingual Kannada and Tamil film Attahasa. The movie is being directing and producing by AMR Ramesh. The movie deals with the kidnap drama of late veteran Kannada actor Dr. Rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X