ಕಂಗನಾ ಕೂದಲಿಗೆ 20 ಲಕ್ಷ ಅಂದ್ರೆ ನಂಬಲೇಬೇಕು
ಬಾಲಿವುಡ್ ನ ಬಿಂಕದ ವೈಯಾರಿ ಕಂಗನಾ ರಣಾವತ್ ತಲೆಗೂದಲಿಗೆ ಬಂಬರ್ ಬೆಲೆ ಬಂದಿದೆ. ಹೀಗೂ ಉಂಟೆ? ಎಂದು ಅಚ್ಚರಿಪಡುವ ಅವಶ್ಯಕತೆ ಇಲ್ಲ. ಆಕೆ ನಟಿಸುತ್ತಿರುವ 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ' ಚಿತ್ರದಲ್ಲಿ ಬರೋಬ್ಬರಿ ಹನ್ನೆರಡು ಅವತಾರಗಳಲ್ಲಿ ಕಾಣಿಸಲಿದ್ದಾರೆ.
ಹನ್ನೆರಡು ಅವತಾರ ಎಂದರೆ ತಲೆಗೂದಲೂ ಬದಲಾಗಬೇಕಲ್ಲವೆ. ಹಾಗಾಗಿ ಹನ್ನೆರಡು ವಿಧವಿಧವಾದ ವಿಗ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಇದಕ್ಕಾಗಿ ರು.20 ಲಕ್ಷ ಖರ್ಚು ಮಾಡಲಾಗಿದೆ. ಬಾಲಿವುಡ್ ಜಗತ್ತಿನ ಮಿನುಗುತಾರೆ ಮಧುಬಾಲಾ ಕುರಿತಾದ ಚಿತ್ರವಿದು.
ಮಧುಬಾಲಾ ಎಂದರೆ ಆಕೆಯ ಕೇಶಸಂಪತ್ತು ನೆನಪಾಗುತ್ತದೆ. ಆಕೆಯ ಕೇಶರಾಶಿ ಅಷ್ಟೊಂದು ಸೊಗಸಾಗಿತ್ತು. ಅದೆಷ್ಟೇ ಹೆಂಗೆಳೆಯರು ಆಕೆಯ ಕೇಶಸೌಂದರ್ಯಕ್ಕೆ ಮಾರುಹೋಗಿದ್ದರು. ಮಧುಬಾಲಾ ಆಗಿ ಕಾಣಿಸಿಕೊಳ್ಳುತ್ತಿರುವ ಕಂಗನಾ ಕೇಶ ಸೌಂದರ್ಯಕ್ಕಾಗಿ ಈ ಪಾಟಿ ಖರ್ಚು ಮಾಡಲಾಗಿದೆ.
ಜಗತ್ತಿನ ಖ್ಯಾತ ಕೇಶ ವಿನ್ಯಾಸಕರು ಕಂಗನಾ ಕೂದಲನ್ನು ಮಧುಮಾಲಾ ಕೂದಲಾಗಿಸಲು ಶ್ರಮಿಸುತ್ತಿದ್ದಾರೆ. ಪಾತ್ರ ನೈಜವಾಗಿ ಮೂಡಿಬರಲು ಇನ್ನಿಲ್ಲದ ಕಸರತ್ತಿನಲ್ಲಿ ನಿರತರಾಗಿದ್ದಾರೆ. ಒಟ್ಟಿನಲ್ಲಿ ಈ ಚಿತ್ರ ಕಂಗನಾರ ವೃತ್ತಿ ಬದುಕಿನಲ್ಲಿ ಹೊಸ ತಿರುವು ನೀಡಲಿದೆ ಎಂದು ನಂಬಲಾಗಿದೆ.


Click it and Unblock the Notifications











