twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದ ಡೆಡ್ಲಿ ಸೋಮ ತೆಲುಗಿನಲ್ಲಿ ನಂದೀಶ್ವರುಡು

    |

    Aditya
    "ಇದೀಗ ಬಿಡುಗಡೆಯಾಗಿರುವ ತೆಲುಗು ಚಿತ್ರ ನಂದಮುರಿ ತಾರಕರತ್ನ ನಾಯಕತ್ವದ 'ನಂದೀಶ್ವರುಡು' ಚಿತ್ರ ಐದು ವರ್ಷಗಳ ಹಿಂದೆ ಕನ್ನಡದಲ್ಲಿ ಬಂದಿದ್ದ 'ಡೆಡ್ಲಿ ಸೋಮ' ಚಿತ್ರದ ರೀಮೇಕ್. ಅಲ್ಲಿ ಅದನ್ನು ಕನ್ನಡಕ್ಕಿಂತ ಹೆಚ್ಚು ರಿಚ್ ಆಗಿ ಮಾಡಿರುವುದರ ಜೊತೆಗೆ ಸ್ವಲ್ಪ ಬದಲಾವಣೆ ಮಾಡಿದ್ದಾರೆ. ಆದರೆ ಸ್ಪೂರ್ತಿ ಮಾತ್ರ ಕನ್ನಡದ ಡೆಡ್ಲಿ ಸೋಮ ಚಿತ್ರದ್ದು " ಎಂದು ಹೇಳಿದ್ದಾರೆ ಡೆಡ್ಲಿ ಸೋಮ ನಿರ್ದೆಶಕ ರವಿ ಶ್ರೀವತ್ಸ.

    ತನ್ನ ನಿರ್ದೆಶನದ ಚಿತ್ರ ತೆಲುಗಿಗೆ ರೀಮೇಕ್ ಆಗಿರುವ ಖುಷಿಯನ್ನೂ ಅನುಭವಿಸುವ ಮೂಡ್ ನಲ್ಲಿಲ್ಲ ರವಿ ಶ್ರೀವತ್ಸ. ಕಾರಣ ತೆಲುಗು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರು ಅವರಿಗೆ ಕಥೆಯ ಕ್ರೆಡಿಟ್ ಕೊಟ್ಟಿಲ್ಲ. ಹಾಗಾಗಿ ನಿರ್ಮಾಪಕ ಮತ್ತು ನಿರ್ದೇಶಕರ ಸಂಘಕ್ಕೆ ತಮಗಾದ ಅನ್ಯಾಯದ ಬಗ್ಗೆ ದೂರು ಕೊಟ್ಟಿದ್ದಾರೆ ರವಿ.

    ಆದರೆ ಡೆಡ್ಲಿ ಸೋಮ ನಿರ್ಮಾಪಕ ಮಂಜು ಹೇಳುವುದೇ ಬೇರೆ. "ಮೊದಲಾದ ಮಾತುಕತೆಯಂತೆ ರೀಮೇಕ್ ಹಕ್ಕಿನ ಹಣ ಅವರಿಗೆ ದೊರೆತಿಲ್ಲ. ಆದರೆ ಅವರ ಹೆಸರನ್ನು ಯಾಕೆ ತೆಲುಗು ಚಿತ್ರತಂಡ ಹಾಕಿಲ್ಲ ಎಂಬುದು ತಮಗೆ ಗೊತ್ತಿಲ್ಲ. ದೂರು ಕೊಡುವ ಮೊದಲೇ ತಮಗೆ ತಿಳಿಸಿದ್ದರೆ ತೆಲುಗು ತಂಡದ ಜೊತೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು". ರವಿಯ ಕಡೆಯಿಂದ ಇದಕ್ಕೆ ಯಾವ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. (ಒನ್ ಇಂಡಿಯಾ ಕನ್ನಡ)

    English summary
    Deadly Soma director Ravi Srivatsa Complaints that Telugu movie Nandishwarudu is Remake of kannada ovie Deadly Soma. But that team didn't give any credit to him for his story. 
 
    Sunday, January 22, 2012, 16:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X