ಹಾಗೂ ಹೀಗೂ ಅರ್ಧ ಸೆಂಚುರಿ ಬಾರಿಸಿದ ಕಿರಾತಕ
ಯಶ್ ಹಾಗೂ ಓವಿಯಾ ಪ್ರಮುಖ ಪಾತ್ರದಲ್ಲಿರುವ 'ಕಿರಾತಕ' ಚಿತ್ರ ಹಾಗೂ ಹೀಗೂ 36 ಕೇಂದ್ರಗಳಲ್ಲಿ ಅರ್ಧ ಸೆಂಚುರಿ ಬಾರಿಸಿದೆ. ಅರ್ಧ ಸೆಂಚುರಿ ಬಾರಿಸಿರುವ ಈ ಚಿತ್ರ ಸೆಂಚುರಿ ಬಾರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ವಿಶ್ವಾಸದಲ್ಲಿದೆ.
ಎಫ್‌ಎಂ ವಾಹಿನಿಗಳು ಕೆಲವು ಸಂಗೀತ ನಿರ್ದೇಶಕರನ್ನು ತಲೆಮೇಲೆ ಹೊತ್ತು ತಿರುಗುತ್ತಿವೆ. ಇನ್ನು ಕೆಲವು ಸಂಗೀತ ನಿರ್ದೇಶಕರು ಇವರ ಪಾಲಿಗೆ ಕಾಲಕಸಕ್ಕಿಂತ ಕಡೆಯಾಗಿದ್ದಾರೆ ಎಂದು ಕಿರಾತಕ ಚಿತ್ರದ ಸಂಗೀತ ನಿರ್ದೇಶಕ ವಿ ಮನೋಹರ್ ಆರೋಪಿಸಿದ್ದರು.
ತಮ್ಮ ಚಿತ್ರದ ಹಾಡುಗಳಿಗೆ ಎಫ್‌ಎಂ ವಾಹಿನಿಗಳಿಂದ ಸರಿಯಾದ ಪ್ರಚಾರ ಸಿಗಲಿಲ್ಲ ಎಂಬ ಕೊರಗು ಅವರದು. ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ ಕಪಾಲಿ ಚಿತ್ರಮಂದಿರದಿಂದ ಎತ್ತಂಗಡಿ ಮಾಡಲಾಗಿದೆ. ಇದು ಯಾವ ನ್ಯಾಯ ಎಂಬುದು ಚಿತ್ರದ ನಿರ್ದೇಶಕ ಪ್ರದೀಪ್ ರಾಜ್ ಅವರ ಬಿಲಿಯನ್ ಡಾಲರ್ ಪ್ರಶ್ನೆ.
ಈ ಎಲ್ಲಾ ಅಡೆತಡೆಗಳ ನಡುವೆ ಕಿರಾತಕ ಚಿತ್ರ ಅರ್ಧ ಸೆಂಚುರಿ ಬಾರಿಸಿದೆ.ತಮಿಳಿನ ಕಲಾವಾಣಿ ಚಿತ್ರದ ರೀಮೇಕ್ ಚಿತ್ರ ಇದಾಗಿದೆ.ಸ್ವಮೇಕ್ ಚಿತ್ರಗಳಿಗೆ ಒಂದು ಕಾಲ ರೀಮೇಕ್ ಚಿತ್ರಗಳಿಗೆ ಮತ್ತೊಂದು ಕಾಲ ಎಂಬುದು ಕಿರಾತಕ ಸಾಬೀತುಪಡಿಸಿದ್ದಾನೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











