ಶ್ರೀನಗರ ಕಿಟ್ಟಿ ಜೊತೆ ಪ್ರಿಯಾಮಣಿ ಕೋ ಕೋ ಶುರು
ತಾಜ್ ಮಹಲ್, ಮೈಲಾರಿ ಚಿತ್ರಗಳ ಯಶಸ್ವಿ ನಿರ್ದೇಶಕ ಆರ್ ಚಂದ್ರು ಕೈಗೆತ್ತಿಕೊಂಡಿರುವ ಹೊಸ ಚಿತ್ರ ಕೋ ಕೋ. ಇದರ ಅಡಿಬರಹ ಕೋಳಿ ಕೋತಿ. ಇತ್ತೀಚೆಗೆ ಈ ಚಿತ್ರದ ಚಿತ್ರೀಕರಣಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಚಾಲನೆ ನೀಡಲಾಯಿತು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಕೋ ಕೋ ಚಿತ್ರಕ್ಕೆ ಶುಭಕೋರಿದರು. ಚಿತ್ರದ ಮುಖ್ಯ್ಯಭೂಮಿಕೆಯಲ್ಲಿ ಶ್ರೀನಗರ ಕಿಟ್ಟಿ ಹಾಗೂ ಪ್ರಿಯಾಮಣಿ ಇದ್ದಾರೆ.
ಭರಣಿ ಮಿನರಲ್ಸ್ ನಿರ್ಮಿಸುತ್ತಿರುವ ಎರಡನೆ ಚಿತ್ರವಿದು. ತೆಲುಗು ನಟ ಶ್ರೀಹರಿ ಪ್ರಮುಖ ಪಾತ್ರ ಪೋಷಿಸಲಿದ್ದಾರೆ. ಪೊಲೀಸ್ ಅಧಿಕಾರಿಯಾಗಬೇಕು ಎಂದು ಕನಸು ಕಾಣುವ ಯುವಕನಾಗಿ ಶ್ರೀನಗರ ಕಿಟ್ಟಿ ಕಾಣಿಸಲಿದ್ದಾರೆ. ಹರ್ಷಿಕಾ ಪೂಣಚ್ಚ, ರವಿ ಕಾಳೆ, ಪ್ರವೀಣ್ ಹಾಗೂ ವರದಾ ರೆಡ್ಡಿ ಚಿತ್ರದ ಉಳಿದ ತಾರಾಬಳಗದಲ್ಲಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Srinagar Kitty and National award winning actress Priyamani lead movie Ko..Ko..begins shooting at Kanteerava Studio. Power star Puneeth Rajkumar, Shivarajkumar and Geetha Shivarajkumar blessed the team. The film has a youthful and captivating script and will be directed by hit maker Chandru.
ಪ್ರಿಯಾಮಣಿ ಶ್ರೀನಗರ ಕಿಟ್ಟಿ ಆರ್ ಚಂದ್ರು ಮೈಲಾರಿ ಶಿವರಾಜ್ ಕುಮಾರ್ priyamani srinagar kitty mylari r chandru shiva rajkumar


Click it and Unblock the Notifications











