For Quick Alerts
  ALLOW NOTIFICATIONS  
  For Daily Alerts

  ಸರ್ಕಸ್ ಚಿತ್ರದ ಹಾಡು ಪಿಸುಮಾತು ಆದಾಗ

  By Staff
  |

  ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಸರ್ಕಸ್' ಚಿತ್ರದ ಜನಪ್ರಿಯ ಗೀತೆ ಚಿತ್ರದ ಶೀರ್ಷಿಕೆಯಾಗುತ್ತಿದೆ. ಸೋನು ನಿಗಂ ಹಾಡಿರುವ ಸರ್ಕಸ್ ಚಿತ್ರದ 'ಪಿಸುಗುಡಲೆ...' ಹಾಡು 'ಪಿಸುಮಾತು' ಆಗುತ್ತಿದೆ.

  ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ ಈ ಗೀತೆಯನ್ನು ಸೋನು ನಿಗಂ ಜೊತೆ ನರೇಶ್ ಅಯ್ಯರ್ ಹಾಡಿದ್ದರು. ಈಗ ಆ ಗೀತೆ ಚಿತ್ರಕ್ಕೆ ಶೀರ್ಷಿಕೆಯಾಗಿದೆ. 'ನಿಷೇಧಾಜ್ಞೆ' ಚಿತ್ರದ ನಿರ್ದೇಶಕ ಪದ್ಮನಾಭ ಈ ಚಿತ್ರವನ್ನು ಶ್ರೀರಾಮ ಮೂರ್ತಿ ಪಿಕ್ಚರ್ಸ್ ಸಂಸ್ಥೆಗಾಗಿ ನಿರ್ದೇಶಿಸುತ್ತ್ತಿದ್ದಾರೆ. ಅಶ್ವತ್ಥ ನಾರಾಯಣ ಮತ್ತು ಬಿಕೆ ರಾಮಣ್ಣ ಅವರು 'ಪಿಸುಮತು' ಚಿತ್ರದ ನಿರ್ಮಾಪಕರು.

  ಅಭಿಮಾನ್ ಸಂಗೀತ ಸಂಯೋಜನೆಯ ಆರು ಹಾಡುಗಳು ಪಿಸುಮಾತಿನಲ್ಲಿವೆ. ಜನವರಿ 2, 2009ರಂದು ಈ ಚಿತ್ರ ಸೆಟ್ಟೇರಲಿದೆ. ಬೆಂಗಳೂರು, ಉಡುಪಿ ಸೇರಿದಂತೆ ರಾಜ್ಯದ ವಿವಿಧ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ಎರಡು ಹಾಡುಗಳನ್ನು ವಿದೇಶದಲ್ಲೂ ಚಿತ್ರೀಕರಿಸಲಾಗುತ್ತದೆ. ಈ ಚಿತ್ರದ ಮೂಲಕ ಮಾರುತಿ ಮತ್ತು ಶ್ರೀಹರ್ಷರನ್ನು ಪರಿಚಯಿಸಲಾಗುತ್ತಿದೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)
  'ಸರ್ಕಸ್ 'ಗಾಗಿ ಗಣೇಶ್ ರ ಮೈನವಿರೇಳಿಸುವ ಸಾಹಸ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X