ವಾರೆವ್ಹಾ ಕಳ್ ಮಂಜ ಕೋಮಲ್ ಕುಮಾರ್ !

By Rajendra

ಊರೆಲ್ಲಾ ಒದ್ದಾಡಿ, ಅಂತೂ ಕೊನೆಗೂ ತಮ್ಮ ಎರಡನೇ ಮದುವೆ ಚಿತ್ರವನ್ನು ಗೆಲ್ಲಿಸಿಕೊಂಡಿರುವ ನಿರ್ಮಾಪಕ ಸುರೇಶ್ ಸದ್ದಿಲ್ಲದೇ ಕೋಮಲ್ ಚಿತ್ರವೊಂದನ್ನು ಶುರುಮಾಡಿರುವುದು ಗೊತ್ತೇ ಇದೆ. ಅದೇ ಚಿತ್ರದ ಶೂಟಿಂಗ್ ಈಗ ಆರಂಭಗೊಂಡಿದೆ. ಚಿತ್ರದ ಹೆಸರು ಗೋವಿಂದಾಯನಮಃ!

ಸುರೇಶ್ ಪಕ್ಕಾ ಬಿಜಿನೆಸ್‌ಮನ್. ಎಲ್ಲಿಂದ, ಯಾರು ಯಾರಿಂದ ಏನೇನು ಕೆಲಸ ತೆಗೆಸಬೇಕು? ಎಲ್ಲಿ ಲಾಕ್ ಮಾಡಿದರೆ ಏನಾಗುತ್ತದೆ ಎನ್ನುವುದನ್ನು ಅರೆದುಕುಡಿದಿರುವ ವ್ಯಕ್ತಿ. ಎರಡನೇ ಮದುವೆ ಚಿತ್ರದಲ್ಲಿ ಕುಮಾರಸ್ವಾಮಿ ರಾಧಿಕಾ ಮ್ಯಾಟರ್ ಇದೆ ಎಂಬ ಬಾಂಬ್ ಹಾಕಿ, ಯಡಿಯೂರಪ್ಪನವರನ್ನೇ ಕೆರಳಿಸಿದ ಅಸಾಮಾನ್ಯ.

ಆ ಚಿತ್ರವನ್ನು ಆ ಮಟ್ಟಕ್ಕೆ ಹಿಟ್ ಆಗಲು ಕಾರಣ ಅವರಿಗಿದ್ದ ಸಿನಿಮಾ ಪ್ರೀತಿ ಮತ್ತು ಬಿಜಿನೆಸ್ ಮೈಂಡು. ಸತತ ಐದಾರು ಚಿತ್ರಗಳಿಂದ ಹೊಡೆತ ತಿಂದಿದ್ದ ದಿನೇಶ್ ಬಾಬುಗೆ ದೊಡ್ಡದಾಗಿ ಬ್ರೇಕ್ ಸಿಕ್ಕಿದ್ದು "ಎರಡನೇ ಮದುವೆ"ಯಲ್ಲಿ! ಸುರೇಶ್ ಆ ಚಿತ್ರವನ್ನು ಎಷ್ಟು ಸಾರಿ ಕರೆಕ್ಷನ್ ಮಾಡಿ, ರೀ ಶೂಟ್ ಮಾಡಿಸಿದ್ದಾರೆ ಎನ್ನುವುದನ್ನು ಆ "ಗುರುಪ್ರಸಾದ"ನೇ ಬಲ್ಲ!

ಕೋಮಲ್‌ಗೆ ಎಷ್ಟು ಮಾರುಕಟ್ಟೆ ಇದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಕಿರುತೆರೆಯಲ್ಲಿ ಬಂದ ವಾರೆವ್ವಾ ಚಿತ್ರ. 42 ಜಿಆರ್‌ಪಿ ರೇಟಿಂಗ್ ಈ ಚಿತ್ರಕ್ಕೆ ಬಂದಿದೆ. ಅಂದರೆ ಇತ್ತೀಚಿನ ದಿನಗಳಲ್ಲಿ ಈ ಮಟ್ಟದಲ್ಲಿ ವೀಕ್ಷಕರನ್ನು ಕಟ್ಟಿ ಕೂರಿಸಿದ್ದು ಆಪ್ತರಕ್ಷಕ. ಅದನ್ನು ಬಿಟ್ಟರೆ ವಾರೆವ್ಹಾ.

ಸ್ವತಃ ಆ ಚಿತ್ರದ ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಈ ವಿಷಯ ಕೇಳಿ ಬೆಚ್ಚಿಬಿದ್ದಿದ್ದಾರೆ. ಹೀಗೆಂದು ಗೊತ್ತಿದ್ದರೆ ಥಿಯೇಟರ್ ಗೋಜಿಗೆ ಹೋಗದೆ ಟೀವಿಯಲ್ಲೇ ರಿಲೀಜ್ ಮಾಡಿ ಐವತ್ತು ಲಕ್ಷ ಉಳಿಸಿಕೊಳ್ಳುತ್ತಿದ್ದೆ ಎಂದು ಸಿಂಗಮ್ಮ ಸಿಂಗ್ರಿ ಕಾಮೆಂಟ್ಸ್ ಮಾಡಿದ್ದಾರೆ! (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Comedian Komal Kumar is getting more hero roles. Recently he got another offer to play the hero in the movie titled Govindaaya Namaha. The movie is directed by debutant Pawan Wodeyar, who has worked as assistant director for popular filmmaker Yogaraj Bhat and produced by Eradaneya Maduve fame Suresh under his own banner Suresh Arts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X