For Quick Alerts
ALLOW NOTIFICATIONS  
For Daily Alerts

ಇಬ್ಬರು ಮಕ್ಕಳ ಮೇಲೆ ಕಾರು ಹರಿಸಿದ ಮಲಯಾಳಂ ನಟ

By Rajendra
|

ಮಲಯಾಳಂ ನಟ ಥಿಲಕನ್ ಪ್ರಯಾಣಿಸುತ್ತಿದ್ದ ಕಾರು ಆಟೋ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವಪ್ಪಿದ್ದಾರೆ. ಫರ್ಜೀನ್ ಖಾನ್ (6) ಹಾಗೂ ಫಾತಿಮಾ (2) ಮೃತಪಟ್ಟ ದುರ್ದೈವಿಗಳು. ಇವರಿಬ್ಬರೂ ತಮ್ಮ ಪೋಷಕರೊಂದಿಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಈ ಘಟನೆ ಕೇರಳದ ಮಲ್ಲಪುರಂ ಜಿಲ್ಲೆಯ ಪಂಡಿಕ್ಕಾಡ್ ಎಂಬಲ್ಲಿ ಗುರುವಾರ (ಏ.21) ನಡೆದಿದೆ.

ಆಟೋ ಮತ್ತು ಕಾರಿನ ನಡುವೆ ಸಂಭವಿಸಿದ ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಅಡಿಮೇಲಾಗಿ ಮಗುಚಿ ಬಿದ್ದಿವೆ. ಥಿಲಕನ್ ಕಾರು ಅತಿವೇಗವಾಗಿ ಪ್ರಯಾಣಿಸುತ್ತಿದ್ದದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಫಿರೋಜ್ ಖಾನ್ ಆಟೋವನ್ನು ಚಾಲು ಮಾಡುತ್ತಿದ್ದಾಗ ಆಕೆಯ ಪತ್ನಿ ಜಸೀನಾ ತನ್ನ ಇಬ್ಬರು ಮಕ್ಕಳನ್ನು ಹಿಂಬದಿಯಲ್ಲಿ ಕುಳ್ಳರಿಸಿಕೊಂಡಿದ್ದರು.

ಅಪಘಾತ ಸಂಭವಿಸಿದ ಕೂಡಲೆ ಸ್ಥಳೀಯರು ಜಮಾಯಿಸಿ ಆಟೋ ರಿಕ್ಷಾದಲ್ಲಿನ ಮಕ್ಕಳನ್ನು ಹೊರತೆಗೆದು ಕೂಡಲೆ ಆಸ್ಪತ್ರೆಗೆ ಸಾಗಿಸಿದರಾದರೂ, ಅಷ್ಟರಲ್ಲಾಗಲೆ ಕಂದಮ್ಮಗಳ ಜೀವ ಹಾರಿಹೋಗಿತ್ತು. ಅಪಘಾತ ಸಂಭವಿಸಿದ ಬಳಿಕ ಥಿಲಕನ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು ಅವರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸುಸ್ಥಿತಿಯಲ್ಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕಾರಿನಲ್ಲಿದ್ದ ಥಿಲಕನ್ ಅವರ ಸಹಾಯಕಿ ಸವಿತಾ ಕೂಡ ಗಾಯಗೊಂಡಿದ್ದಾರೆ. ಇವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಯಾಣಿಸುತ್ತಿದ್ದರು. ವೇಗವಾಗಿ ಹಾಗೂ ಬೇಕಾಬಿಟ್ಟಿ ಕಾರು ಚಾಲೂ ಮಾಡಿದ್ದಕ್ಕಾಗಿ ಪಂಡಿಕ್ಕಾಡ್ ಪೊಲೀಸರು ಥಿಲಕನ್ ಮೇಲೆ ಕೇಸನ್ನು ದಾಖಲಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಥಿಲಕನ್ ಆನಾರೋಗ್ಯದಿಂದ ಬಳಲುತ್ತಿರುವುದಾಗಿ ಸುದ್ದಿ.

English summary
Six-year-old Farzeen Khan and two-year-old Fathima were killed on the spot and their parents seriously injured when their auto rickshaw collided with Malayalam film actor Thilakan’s speeding car at Pandikkad in Malappuram district on Thursday. Both vehicles turned turtle after the collision. Firoz Khan was driving the auto rickshaw and his wife Jaseena was in the back seat with the kids.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more