ಮಗಧೀರ ರಾಜಮೌಳಿ ಕನ್ನಡ ರಿಮೇಕ್ ಗಳು

By Mahesh
<ul id="pagination-digg"><li class="previous"><a href="/news/22-tollywood-director-ss-rajmouli-kannada-remakes-aid0039.html">« Previous</a>

A Still from Maryada Ramanna movie
ಎಸ್ ಎಸ್ ರಾಜಮೌಳಿ ತೆಲುಗಿನ ಅತ್ಯಂತ ಯಶಸ್ವಿ ನಿರ್ದೇಶಕ. ಆತ ಮುಟ್ಟಿದ್ದೆಲ್ಲ ಚಿನ್ನವಾಗಿದೆ. ರಾಯಚೂರಿನ ಮೂಲದ ರಾಜಮೌಳಿ ಸೋದರ ಸಂಬಂಧಿ ಕೀರವಾಣಿ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತ.

ಈಗ ರಾಜಮೌಳಿ ಅವರ ಯಶಸ್ವಿ ಚಿತ್ರಗಳನ್ನು ಕನ್ನಡಕ್ಕೆ ರಿಮೇಕ್ ಮಾಡುವ ಟ್ರೆಂಡ್ ಆರಂಭವಾಗಿದೆ. ತೆಲುಗಿನಲ್ಲಿ ಸುನೀಲ್ ಎಂಬ ಆರಡಿ ಅಜಾನುಬಾಹು ಹಾಸ್ಯನಟನನ್ನು ಹೀರೋ ಮಾಡಿ, 'ಮರ್ಯಾದಾ ರಾಮನ್ನ' ಎಂಬ ಸಿನಿಮಾ ನಿರ್ದೇಶಿಸಿ ಕೋಟಿಗಟ್ಟಲೆ ಲಾಭ ಗಳಿಸುವಂತೆ ಮಾಡಿದ ಕೀರ್ತಿ ರಾಜಮೌಳಿಗೆ ಸಲ್ಲುತ್ತದೆ.

'ಈಗ ' ಎಂಬ ಸಿನಿಮಾಕ್ಕೆ ಸುದೀಪ್ ರನ್ನು ನೆಗಟಿವ್ ರೋಲ್ ಗೆ ಆಯ್ಕೆ ಮಾಡಿಕೊಂಡು ಹೊಸ ಸಾಹಸ ಮಾಡುತ್ತಿದ್ದಾರೆ. ಸಾಹಸ ಏಕೆಂದರೆ ಈ ತೆಲುಗು ಚಿತ್ರದ ಹೀರೋ ಒಂದು ನೊಣ. ಆ ವಿಷಯ ಹಾಗಿರಲಿ..

ಕನ್ನಡಕ್ಕೆ ರಾಜಮೌಳಿ ಸಿನಿಮಾಗಳು ರಿಮೇಕ್ ಆಗುತ್ತಿವೆ. ಮರ್ಯಾದೆ ರಾಮಣ್ಣ ಹೆಸರಿನಲ್ಲಿ ಕನ್ನಡದಲ್ಲಿ ಕೋಮಲ್ ಕುಮಾರ್ ನಟಿಸುತ್ತಿದ್ದು, ಸೆ. 23ರಂದು ರಾಜ್ಯದೆಲ್ಲೆಡೆ ಮೊದಲ ಪ್ರದರ್ಶನ ಕಾಣಲಿದೆ. ಎಂಎಂ ಕೀರವಾಣಿ ಸಂಗೀತ ಹಾಗೂ ರಾಜಮೌಳಿ ಅವರ ಸ್ಕ್ರಿಪ್ಟ್ ಹಾಗೆ ಉಳಿಸಿಕೊಂಡು ಪತ್ತಿ ವಿಎಸ್ ಗುರುಪ್ರಸಾದ್ ಅವರು ನಿರ್ದೇಶಿಸುತ್ತಿದ್ದಾರೆ.

ಕೋಮಲ್ ಅವರ ಕಳ್ಳಮಂಜ ಅಷ್ಟೇನು ಸೌಂಡ್ ಮಾಡದ ಕಾರಣ, ಈ ಚಿತ್ರದ ಮೇಲೆ ಅವರಿಗೆ ಭಾರಿ ನಿರೀಕ್ಷೆಯಿದೆ. ಇನ್ನೊಂದು ವಿಷ್ಯ 2012 ತನಕ ಕೋಮಲ್ ಡೇಟ್ಸ್ ಸಿಕ್ಕೋದಿಲ್ವಂತೆ. ಅಷ್ಟು ಆಫರ್ ಗಳು ಕೋಮಲ್ ಬಳಿ ಇದೆಯಂತೆ.

ರಾಜಮೌಳಿ ನಿರ್ದೇಶನ ಮತ್ತೊಂದು ಯಶಸ್ವಿ ಚಿತ್ರ ಕನ್ನಡಕ್ಕೆ ಬರುತ್ತಿದೆ.. ಯಾವುದದು?...

<ul id="pagination-digg"><li class="previous"><a href="/news/22-tollywood-director-ss-rajmouli-kannada-remakes-aid0039.html">« Previous</a>

More from Filmibeat

English summary
Tollywood director SS Rajamouli movies are being remade in Kannada. After Maryada Rammanna now Chatrapathi is coming to Kannada industry with Siddanth has hero. It is interesting see whether Telugu cinema successful formula works well in Sandalwood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X