For Quick Alerts
  ALLOW NOTIFICATIONS  
  For Daily Alerts

  ಕೊಲೆ ಆರೋಪ ಕನ್ನಡದ ನಟಿ ಮೋನಿಕಾ ಬಂಧನ

  By Staff
  |

  ಮುಂಬೈ, ಮೇ 22: ನೀರಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ನಟಿ ಮೈಸೂರಿನ ಬೆಡಗಿ ಮೋನಿಕಾ ಸೇರಿದಂತೆ ಇಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ನಟಿ ಮರಿಯಾ ಮೋನಿಕಾ ಸುಸೈರಾಜ್ (27) ಜತೆ ಕೊಚ್ಚಿ ನೌಕಾನೆಲೆಯಲ್ಲಿ ಇಂಜನಿಯರ್ ಆಗಿರುವ ಲೆಫ್ಟಿನೆಂಟ್ ಎಂ.ಎಲ್.ಜೆರೋಮೆ ಮ್ಯಾಥ್ಯೂ ಅವರನ್ನು ಬಂಧಿಸಲಾಗಿದೆ.

  ಮುಂಬೈನ ಮೆಲಾಡ್ ನಲ್ಲಿ ಮೇ 7 ರಂದು ಸಿನರ್ಜಿ ಆಡ್ ಲ್ಯಾಬ್ಸ್ ಚಿತ್ರ ನಿರ್ಮಾಣ ಸಂಸ್ಥೆಯ ಮೇಲ್ವಿಚಾರಕ ನೀರಜ್ ಅಮರ್ ನಾಥ್ ಗ್ರೋವರ್ ನನ್ನು ಕೊಲೆ ಮಾಡಲಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಅವಕಾಶ ಕಡಿಮೆಯಾಗಿದ್ದರಿಂದ ಹಿಂದಿ ಧಾರವಾಹಿಯಲ್ಲಿ ನಟಿಸುವ ಸಲುವಾಗಿ ಆಡಿಷನ್ ನಲ್ಲಿ ಪಾಲ್ಗೊಳ್ಳಲು ಮೋನಿಕಾ ಮುಂಬೈಗೆ ತೆರಳಿದ್ದರು. ಆದರೆ ಆಡ್ ಲ್ಯಾಬ್ಸ್ ಸಂಸ್ಥೆ ಮೇಲ್ವಿಚಾರಕನೊಂದಿಗೆ ಮೋನಿಕಾ ಹೊಂದಿದ್ದ ಅಕ್ರಮ ಸಂಬಂಧ ಕೊಲೆ ಕಾರಣವಾಗಿದೆ. ಮೋನಿಕಾ ಮತ್ತು ಮ್ಯಾಥ್ಯೂ ಸೇರಿ ನೀರಜ್ ನನ್ನು ಹತ್ಯೆ ಮಾಡಿ ಬಳಿಕ ಆತನ ಮೃತ ದೇಹವನ್ನು ಗೋಣಿ ಚೀಲದಲ್ಲಿ ತುಂಬಿ ನಗರದ ಹೊರವಲಯದಲ್ಲಿ ಬಿಸಾಡಿದ್ದರು. ವ್ಯಾಪಕ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ನಟಿ ಮೋನಿಕಾ ವಿಷ್ಣುವರ್ಧನ್ ನಾಯಕರಾಗಿ ನಟಿಸಿರುವ ಏಕದಂತ, ಜೂಟ್, ಓಕೆ ಸಾರ್ ಓಕೆಮತ್ತು ಪ್ರೇಮ್ ನಿರ್ದೇಶನದ ಎಕ್ಸ್ ಕ್ಯೂಸ್ ಮಿ ಚಿತ್ರ ಸೇರಿದಂತೆ ಐದು ಚಿತ್ರದಲ್ಲಿ ನಟಿಸಿದ್ದರು. ಓಕೆ ಸಾರ್ ಓಕೆ ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕ ಮದನ್ ಪಟೇಲ್ ಕಿರುಕುಳ ನೀಡುತ್ತಿದ್ದಾರೆ, ಆಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಹನಟಿ ರಶ್ಮಿ ಜತೆ ಮೋನಿಕಾ ಆರೋಪ ಮಾಡಿದ್ದರು. ಮೈಸೂರಿನಲ್ಲಿ ಜರ್ನಲಿಸಂ ವಿದ್ಯಾರ್ಥಿಯಾಗಿದ್ದ ಮೋನಿಕಾ, ಕಾಲೇಜಿಗೆ ಬರುತ್ತಿದ್ದದ್ದು ಕಮ್ಮಿ ಎಂದು ಸಹಪಾಠಿಗಳು ಹೇಳಿದ್ದಾರೆ. ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಹೇಳಿಕೊಂಡು ತಿರುಗುತ್ತಿದ್ದ ಮೋನಿಕಾ, ಭರತನಾಟ್ಯ , ಪಾಶ್ಚಾತ್ಯ ನೃತ್ಯಗಳಲ್ಲಿ ಪರಿಣತಿ ಪಡೆದಿದ್ದರು ಹಾಗೂ ಉತ್ತಮ ನೃತ್ಯಪಟುವಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದರು.

  (ದಟ್ಸ್ ಕನ್ನಡ ಸಿನಿವಾರ್ತೆ)

  ಮರ್ಡರಸ್ ಮೋನಿಕಾ ಸುಸೈರಾ ಚಿತ್ರಪಟ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X