For Quick Alerts
ALLOW NOTIFICATIONS  
For Daily Alerts

ನರಹಂತಕ ವೀರಪ್ಪನ್ ಅಟ್ಟಹಾಸ, ಇನ್‌ಸೈಡ್ ಸ್ಟೋರಿ

By Rajendra
|
<ul id="pagination-digg"><li class="next"><a href="/news/22-arjun-sarja-challenging-role-in-attahasa-aid0052.html">Next »</a></li></ul>

ದಂತಚೋರ, ಕಾಡುಗಳ್ಳ, ನರಹಂತಹ ವೀರಪ್ಪನ್ ಜೀವನಕತೆಯಾಧಾರಿತ ಚಿತ್ರ 'ಅಟ್ಟಹಾಸ'. ಈ ಚಿತ್ರಕ್ಕೆ ಅಡಿಬರಹವಾಗಿ 'ಇನ್‌ಸೈಡ್ ಸ್ಟೋರಿ' ಎಂದಿಡಲಾಗಿದೆ. ವೀರಪ್ಪನ್ ಅಟ್ಟಹಾಸಗಳ ಬಗ್ಗೆ ಸಾಕಷ್ಟು ಆರೋಪಗಳಿದ್ದರೂ ಲಭ್ಯವಿರುವ ಸಾಕ್ಷ್ಯಾಧಾರಗಳು ಮಾತ್ರ ಅಷ್ಟಕ್ಕಷ್ಟೆ.

ಮೂರು ದಶಕಗಳ ಕಾಲ ವೀರಪ್ಪನ್ ನಡೆಸಿದ ಅಡವಿ ಜೀವನ, ವರನಟ ದಿವಂಗತ ಡಾ.ರಾಜ್ ಕುಮಾರ್ ಕಿಡ್ನಾಪ್‌ನ ಯಥಾವತ್ ಘಟನೆಗಳ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಬೆಂಗಳೂರು ಸಮೀಪದ ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸಾವನದುರ್ಗ ಅರಣ್ಯ ಪ್ರದೇಶದಲ್ಲಿ ಭರದಿಂದ ಸಾಗಿದೆ. ಸೈನೈಡ್ ಖ್ಯಾತಿಯ ಎಎಂಆರ್ ರಮೇಶ್ ನಿರ್ದೇಶನದಲ್ಲಿ ಚಿತ್ರೀಕರಣ ನಡೆಯುತ್ತಿದೆ.

ತೀವ್ರ ಸಂಚನಕ್ಕೆ ಕಾರಣವಾಗಿದ್ದ ರಾಜ್ ಕಿಡ್ನಾಪ್ ಕುರಿತ ಚಿತ್ರವನ್ನು ಬೆಳ್ಳಿತೆರೆಗೆ ಇದೇ ಮೊದಲ ಬಾರಿಗೆ ತರಲಾಗುತ್ತಿದೆ. ವೀರಪ್ಪನ್ ಕತೆ ಮುಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಮಿಳುನಾಡಿನ ಪೊಲೀಸ್ ಅಧಿಕಾರಿ ವಿಜಯಕುಮಾರ್ ಪಾತ್ರವನ್ನು ಬಹುಭಾಷಾ ನಟ ಅರ್ಜುನ್ ಸರ್ಜಾ ಪೋಷಿಸುತ್ತಿದ್ದಾರೆ.

<ul id="pagination-digg"><li class="next"><a href="/news/22-arjun-sarja-challenging-role-in-attahasa-aid0052.html">Next »</a></li></ul>

English summary
Kannada movie Veerappan Attahasa is a life sketch of dreaded smuggler, poacher and killer Veerappan. The screenplay of ‘Attahara’ also includes Dr Rajakumar kidnap & minister Nagappa kidnap. Presently the shooting is progressed in Savandurga forest area. AMR Ramesh is the director of the movie. Kishore, Arjun Sarja, Suresh Oberoi, Vijayalakshmi are in the cast.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more