ಆಗಲೋ ಈಗಲೋ ಎತ್ತಂಗಡಿಯಾಗಲಿದೆ 'ವಿಷ್ಣು'

By Rajendra

ಇದು ಲೇಟೆಸ್ಟ್ ಗಾಂಧಿನಗರದ ಬಾಕ್ಸಾಫೀಸ್ ರಿಪೋರ್ಟ್. ಇನ್ನು ಬಿಡುಗಡೆಯಾಗಿ ಒಂದು ವಾರವೂ ಕಳೆದಿಲ್ಲ ಆಗಲೆ ಬಣಬಣ ಎನ್ನುತ್ತಿದೆ 'ವಿಷ್ಣು' ಚಿತ್ರ. ಪ್ರೇಕ್ಷಕರಿಲ್ಲದೆ ಚಿತ್ರ ಇನ್ನೇನು ಆಗಲೋ ಈಗಲೋ ಎತ್ತಂಗಡಿಯಾಗುವ ಹಂತ ತಲುಪಿದೆ. ಸಾಧ್ಯವಾದರೆ ಒಮ್ಮೆ ನೋಡಿ 'ಅನುಭವಿಸಿ' ಎನ್ನುತ್ತವೆ ಮೂಲಗಳು.

ಚಿತ್ರದ ಹೆಸರು ನೋಡಿ ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕರ ಪಾಡು ಇಂಗುತಿಂದ ಮಂಗನಂತಾಗಿತ್ತು ಎಂಬುದು ಕೆಲವರ ಅಭಿಪ್ರಾಯ. ಪ್ರೇಕ್ಷಕರು ಕೊನೆಯ ತನಕ ಚಾತಕ ಪಕ್ಷಿಯಂತೆ ಎದುರು ನೋಡಿದರೂ ಚಿತ್ರದಲ್ಲಿ ಎಲ್ಲೂ ಸಾಹಸ ಸಿಂಹ ವಿಷ್ಣುವರ್ಧನ ಕಾಣಸಿಗಲ್ಲ.

ಈ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನರಿಗೆ ಸಂಬಂಧಿಸಿದ ಒಂದೇ ಒಂದು ಎಳೆಯೂ ಇಲ್ಲ. ಹೋಗಲಿ ಚಿತ್ರದಲ್ಲಿ ಮನಸ್ಸಿಗೆ ಮುದನೀಡುವ ಸನ್ನಿವೇಶಗಳು ಇವೆಯೇ ಎಂದರೆ, ಅದೂ ಇಲ್ಲ. ಒಂದು ವೇಳೆ ಈ ಚಿತ್ರವನ್ನು ಸಾಹಸಸಿಂಹ ವಿಷ್ಣುವರ್ಧನ್ ಕಣ್ಮರೆಯಾದಾಗ ಬಿಡುಗಡೆ ಮಾಡಿದ್ದಿದ್ದರೆ ಅದರ ಕತೆಯೇ ಬೇರೆ ಇರುತ್ತಿತ್ತು. ಕನಿಷ್ಠ ನಾಲ್ಕು ವಾರಗಳ ಕಾಲವಾದರೂ ಓಡುತ್ತಿತ್ತು ಎಂಬ ಮಾತುಗಳು ಕೇಳಿಬಂದಿವೆ. ಅಭಿಜಿತ್ ಪೋಷಿಸಿರುವ ವಿಷ್ಣು ಪಾತ್ರ ಪೇಲವವಾಗಿದೆ.

ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರುವ ಅಭಿಜಿತ್ ಅವರದು ಚಿತ್ರದಲ್ಲಿ ದ್ವಿಪಾತ್ರಾಭಿನಯ. ಪೂನಂ, ಕ್ಯಾಥರಿನ್, ಸತ್ಯಪ್ರಕಾಶ್, ಗೀತಾ, ಶರತ್ ಲೋಹಿತಾಶ್ವ, ಆಶಿಷ್ ವಿದ್ಯಾರ್ಥಿ, ಬುಲೆಟ್ ಪ್ರಕಾಶ್, ರವಿಶಂಕರ್‌ರಂತಹ ಅದ್ಭುತ ನಟರಿದ್ದರೂ ಪ್ರೇಕ್ಷಕರನ್ನು ಸೆಳೆಯುವ ಅಂಶಗಳು ಇಲ್ಲದೆ ಚಿತ್ರ ಎತ್ತಂಗಡಿಯಾಗುವ ಹಂತ ತಲುಪಿದೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
It is another Kannada film that bears the name of Kannada movie icon Vishnuvardhana. This film is titled Vishnu and directed by actor Abhijit who has played two roles in it. But the movie Vishnu is just an ordinary flick. Sources claims that the movie soon oust from theaters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X