ಎರಡು ಚಿತ್ರಗಳಲ್ಲಿ ಚೆಂಡು ಮಲ್ಲಿಗೆ ನಮಿತಾ ಚೆಂಡಾಟ

By Rajendra

ನಮಿತಾ ಐ ಲವ್ ಯು ಚಿತ್ರ ಮಕಾಡೆ ಮಲಗಿದ ಬಳಿಕ ಸೆಕ್ಸಿ ತಾರೆ ನಮಿತಾ ಕನ್ನಡ ಚಿತ್ರಗಳಲ್ಲಿ ನಟಿಸುತ್ತಾರೋ ಇಲ್ಲವೋ ಎಂಬ ಅನುಮಾನ ಗಾಂಧಿನಗರದ ಬೀದಿಗಳಲ್ಲಿ ಮಿಂಚಿನಂತೆ ಸಂಚರಿಸಿತ್ತು. ಎರಡು ಕನ್ನಡ ಚಿತ್ರಗಳಿಗೆ ನಮಿತಾ ಸಹಿ ಮಾಡುವ ಮೂಲಕ ಆ ಅನುಮಾನಗಳನ್ನು ನುಚ್ಚುನೂರು ಮಾಡಿದ್ದಾರೆ.

'ಬೆಂಕಿ ಬಿರುಗಾಳಿ' ಹಾಗೂ 'ಸಿಕ್ಕಾಪಟ್ಟೆ ಇಷ್ಟಾ ಪಟ್ಟೆ' ಚಿತ್ರಗಳಿಗೆ ನಮಿತಾ ರಂಗಪ್ರವೇಶ ಮಾಡಿದ್ದಾರೆ. 'ಸಿಕ್ಕಾಪಟ್ಟೆ ಇಷ್ಟಾ ಪಟ್ಟೆ" ಚಿತ್ರದಲ್ಲಿ ನಮಿತಾ ಲೇಡಿ ಪೊಲೀಸ್ ಆಗಿ ಕಾಣಿಸಲಿದ್ದಾರೆ. 'ಬೆಂಕಿ ಬಿರುಗಾಳಿ'ಯಲ್ಲಿ ಡಿಶುಂ ಡಿಶುಂ ಪಾತ್ರವಂತೆ. ಚೆಂಡು ಮಲ್ಲಿಗೆ ನಮಿತಾ ದುಷ್ಟರನ್ನು ಚೆಂಡಾಡಲಿದ್ದಾರೆ.

ಒಟ್ಟಾರೆಯಾಗಿ ನಮಿತಾ ಕನ್ನಡ ಚಿತ್ರರಂಗದಲ್ಲಿ ತೆರವಾಗಿದ್ದ ಮಾಲಾಶ್ರೀ ಅವರ ಸ್ಥಾನವನ್ನು ತುಂಬಲು ತುದಿಗಾಲಲ್ಲಿ ನಿಂತಿದ್ದಾರೆ. 'ಸಿಕ್ಕಾಪಟ್ಟೆ ಇಷ್ಟಾ ಪಟ್ಟೆ' ಚಿತ್ರದಲ್ಲಿ ಕೀರ್ತಿ ಚಾವ್ಲಾ, ಮೇಘನಾ ನಾಯ್ಡು, ಕಿರಣ್ ರಾಥೋಡ್ ಸೇರಿದಂತೆ ಹಲವು ಲೇಡಿ ಟೈಗರ್‌ಗಳು ಅಭಿನಯಿಸುತ್ತಿರುವುದು ವಿಶೇಷ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
South Indian sensational actress Namitha is accepting two Kannada movies Benki Birugali and Sikkapatte Ishta Patte. Both movies are action oriented movies.Her recent movie Namitha I Love You not doing well at box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X