ಬಾಕ್ಸಾಫೀಸಲ್ಲಿ ದೀಪಾವಳಿ ಆಚರಿಸಿದ ಪಂಚರಂಗಿ
ಬಾಕ್ಸಾಫೀಸ್ ಗಳಿಕೆಯಲ್ಲಿ ಯೋಗರಾಜ್ ಭಟ್ ನಿರ್ದೇಶಿಸಿದ 'ಪಂಚರಂಗಿ' ಚಿತ್ರ ದೀಪಾವಳಿಗೂ ಮುನ್ನವೇ ಹಬ್ಬ ಆಚರಿಸಿದೆ. ಮೂಲಗಳ ಪ್ರಕಾರ 'ಪಂಚರಂಗಿ' ಚಿತ್ರ ಇದುವರೆಗೂ ರು.10 ಕೋಟಿ ಗಳಿಸಿದೆ. ಈ ವಾರ ಮತ್ತಷ್ಟು ಚಿತ್ರಮಂದಿರಗಳಲ್ಲಿ 'ಪಂಚರಂಗಿ' ಬಿಡುಗಡೆಯಾಗಲಿದೆ. ಇಪ್ಪತ್ತು ತಾಲೂಕು ಕೇಂದ್ರಗಳಲ್ಲಿ ಬಿಡುಗಡೆಯಾಗಲಿದೆ.
ಈ ಮಾಸಾಂತ್ಯಕ್ಕೆ ವಿದೇಶಗಳಲ್ಲೂ 'ಪಂಚರಂಗಿ' ತೆರೆಕಾಣಲಿದೆ. ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲಿ ರು.1.58 ಕೋಟಿ ಗಳಿಸಿತ್ತು. ಎರಡನೆ ವಾರದಲ್ಲಿ ಚಿತ್ರದ ಗಳಿಕೆ ರು.1.99 ಕೋಟಿ ಮುಟ್ಟಿತ್ತು. ಚಿತ್ರದ ಇದುವರೆಗಿನ ಗಳಿಕೆ ರು. 10 ಕೋಟಿ ಎನ್ನುತ್ತವೆ ಗಾಂಧಿನಗರದ ಮೂಲಗಳು.
ಮೊದಲ ವಾರ 45 ಕೇಂದ್ರಗಳಲ್ಲಿ ಬಿಡುಗಡೆಯಾದ 'ಪಂಚರಂಗಿ' ಬಳಿಕ ಚಿತ್ರಮಂದಿರದ ಸಮಸ್ಯೆ ಕಾರಣ 39 ಚಿತ್ರಮಂದಿರಗಳಿಗೆ ಸೀಮಿತವಾಯಿತು. ಪ್ರಸ್ತುತ 20 ಪ್ಲಸ್ ಚಿತ್ರಮಂದಿರಗಳಲ್ಲಿ 'ಪಂಚರಂಗಿ' ಪೋಂ ಪೋಂ ಎನ್ನುತ್ತಿದೆ. ಪಕ್ಕದ ರಾಜ್ಯಗಳಲ್ಲೂ ಪಂಚರಂಗಿ ತೆರೆ ಕಾಣುವ ಸೂಚನೆಗಳಿವೆ.
ಪಂಚರಂಗಿ ಯೋಗರಾಜ್ ಭಟ್ ನಿಧಿ ಸುಬ್ಬಯ್ಯ ಬಾಕ್ಸಾಫೀಸ್ pancharangi box office yogaraj bhat diganth nidhi subbaiah


Click it and Unblock the Notifications