ಜೋಗಯ್ಯನಿಗೆ ಸಡ್ಡು ಹೊಡೆದ ಪರಮಾತ್ಮ
ಈ ರೀತಿಯ ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಚಿತ್ರಗಳ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ಜೋಗಯ್ಯನ ದಾಖಲೆಯನ್ನು ಪರಮಾತ್ಮ ಮುರಿದಿದ್ದಾನೆ ಎಂಬುದು ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಸರಿದಾಡುತ್ತಿರುವ ಲೇಟೆಸ್ಟ್ ಸುದ್ದಿ.
ಪರಮಾತ್ಮ ಟಿವಿ ರೈಟ್ಸ್ ದಾಖಲೆ ಬೆಲೆಗೆ ಮಾರಾಟವಾಗಿದೆಯಂತೆ. ಮೂಲಗಳ ಪ್ರಕಾರ, ರು.3.5 ಕೋಟಿಗೆ ಪರಮಾತ್ಮ ಟಿವಿ ಹಕ್ಕುಗಳು ಮಾರಾಟವಾಗಿವೆ. ಟಿವಿ ರೈಟ್ಸ್ ಮಟ್ಟಿಗೆ ಜೋಗಯ್ಯನ ದಾಖಲೆಯನ್ನು ಪರಮಾತ್ಮ ಮುರಿದಿದ್ದಾನೆ. ಜೋಗಯ್ಯ ಟಿವಿ ರೈಟ್ಸ್ ರು.3 ಕೋಟಿಗೆ ಮಾರಾಟವಾಗಿದ್ದವು.
ಜೋಗಯ್ಯ ಚಿತ್ರದ ವಿತರಣೆ ಹಕ್ಕುಗಳಿಗೂ ಸಖತ್ ಡಿಮ್ಯಾಂಡ್ ಇದೆಯಂತೆ. ಬೆಂಗಳೂರು, ತುಮಕೂರು ಹಾಗೂ ಕೋಲಾರ ವಿತರಣೆ ಹಕ್ಕುಗಳು ಬಿಕೆ ಶ್ರೀನಿವಾಸ್ ಪಡೆದಿದ್ದು ಸರಿಸುಮಾರು ರು.5 ಕೋಟಿಗೆ ಮಾರಾಟವಾಗಿದೆ ಎಂಬುದು ಗಾಂಧಿನಗರದ ತಾಜಾ ಖಬರ್. (ಏಜೆನ್ಸೀಸ್)
More from Filmibeat
English summary
According to Gandhinagar sources, there is a tough fight happening between the two movie Paramathma and Jogayya. Recently, the TV rights of the film Paramathma were sold and it is heard that the price was Rs 3.5 crores. Paramathma has beaten Jogayya's record in this category.
ಜೋಗಯ್ಯ ಪರಮಾತ್ಮ ಶಿವರಾಜ್ ಕುಮಾರ್ ಯೋಗರಾಜ್ ಭಟ್ ಪ್ರೇಮ್ jogaiah paramathma puneet shiva rajkumar yogaraj bhat prem


Click it and Unblock the Notifications











