ಹೊಸ ಹುರುಪು, ಉತ್ಸಾಹದಿಂದ ಎದ್ದು ಬಂದ ಪಾರ್ವತಮ್ಮ

'ಜಾಕಿ' ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಪಾರ್ಮತಮ್ಮ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅವರು ಅಕ್ಷರಶಃ ಮರೆಯಾಗಿದ್ದರು. ಶಿವಣ್ಣನ ಇಪ್ಪತ್ತೈದರ ಸವಿನೆನಪಿನ ಕಾರ್ಯಕ್ರಮಗಳಲ್ಲೂ ಪಾರ್ವತಮ್ಮ ಕಾಣಿಸಿಕೊಳ್ಳಲಿಲ್ಲ. ಯಾವುದೇ ಚಿತ್ರದ ಮುಹೂರ್ತ, ಕಾರ್ಯಕ್ರಮಗಳಿಗೂ ಹಾಜರಾಗಿರಲಿಲ್ಲ.
ಈಗ 'ಹುಡುಗರು' ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ತಂದಿದ್ದಾರೆ. 'ಹುಡುಗರು' ಚಿತ್ರದಂತೆ ಎಲ್ಲ ಕನ್ನಡ ಚಿತ್ರಗಳು ಶತದಿನೋತ್ಸವ ಆಚರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಪಾರ್ವತಮ್ಮನವರ ಆಗಮನ ಚಿತ್ರರಂಗಕ್ಕೆ ಮತ್ತಷ್ಟು ಲವಲವಿಕೆ ತಂದಿದೆ.
ಪಾರ್ವತಮ್ಮನವರು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅವರು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಪಾರ್ವತಮ್ಮನವರನ್ನು ಕಣ್ಣಿಗೆ ರೆಪ್ಪೆಯಂತೆ ನೋಡಿಕೊಂಡವರು ರಾಘವೇಂದ್ರ ರಾಜ್ ಕುಮಾರ್. ಹೊಸ ಹುರುಪು, ಉತ್ಸಾಹದದೊಂದಿಗೆ ಕನ್ನಡ ಚಿತ್ರೋದ್ಯಮಕ್ಕೆ 'ವಜ್ರೇಶ್ವರಿ'ಯ ಆಗಮನವಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Kannada films renowned producer, distributor Parvathamma Rajkumar, wife of Kannada matinee idol late Dr.Rajkumar is back to work. She been sick for the past few weeks. She has appeared in Puneet Rajkumar's latest Hudugaru 100 days function.
ಪಾರ್ವತಮ್ಮ ರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಅನಾರೋಗ್ಯ parvathamma rajkumar puneeth rajkumar raghavendra rajkumar health


Click it and Unblock the Notifications











