ಮಾರ್ಚ್ ಮೂರರಿಂದ ಪವರ್ ಸ್ಟಾರ್ 'ಜಾಕಿ'

By Rajendra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮುಂದಿನ ಚಿತ್ರ 'ಜಾಕಿ' ಸೆಟ್ಟೇರಲು ವೇದಿಕೆ ಸಿದ್ಧವಾಗಿದೆ. ಡಾ.ರಾಜ್ ಕುಮಾರ್ ಕುಟುಂಬ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಆಕ್ಷನ್, ಕಟ್ ಹೇಳುತ್ತಿರುವವರು ದುನಿಯಾ, ಜಂಗ್ಲಿ, ಇಂತಿ ನಿನ್ನ ಪ್ರೀತಿಯ ಖ್ಯಾತಿಯ ನಿರ್ದೇಶಕ ಸೂರಿ. ಮಾರ್ಚ್ 3 ರಂದು 'ಜಾಕಿ' ಸೆಟ್ಟೇರಲಿದೆ.

ರಾಜ್ ಕುಮಾರ್ ಕುಟುಂಬ ನಿರ್ಮಿಸಿದ ಚಿತ್ರಗಳೆಂದರೆ ಮನೆಮಂದಿಯಲ್ಲಾ ಕುಳಿತು ಒಟ್ಟಿಗೆ ನೋಡಬಹುದಾದ ಸದಭಿರುಚಿಯ ಚಿತ್ರಗಳು ಎಂಬ ಭಾವನೆ ಪ್ರೇಕ್ಷಕರ ಮನಸ್ಸಿನಲ್ಲಿದೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಚಿತ್ರಗಳು ಇರುತ್ತವೆ ಎಂಬುದು ನಿರ್ವಿವಾದ ಅಂಶ. ಈ ಕಾರಣಕ್ಕಾಗಿಯೇ ಇದುವರೆಗೂ ರಾಜ್ ಕುಮಾರ್ ಕುಟುಂಬ ನಿರ್ಮಿಸಿದ 75 ಚಿತ್ರಗಳಲ್ಲಿ ಬಹುತೇಕ ಚಿತ್ರಗಳು ಗೆದ್ದಿವೆ.

ಪೂರ್ಣಿಮಾ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ 'ಜಾಕಿ' ಚಿತ್ರಕ್ಕೆ ಇತ್ತೀಚೆಗೆ ಆಕಾಶ್ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣಕ್ಕೆ ಚಾಲನೆ ನೀಡಲಾಯಿತು. ಯೋಗರಾಜಭಟ್ ಸಾಹಿತ್ಯ ಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಕಾರ್ಯಕಾರಿ ನಿರ್ಮಾಪಕರು.

ಚಿತ್ರದ ತಾರಾಗಣದಲ್ಲಿ ರಂಗಾಯಣ ರಘು, ರವಿಕಿರಣ್ ಮುಂತಾದವರು ಇದ್ದಾರೆ. ಪುನೀತ್ ಜೊತೆ ನಾಯಕಿಯಾಗಿ ನಟಿಸುತ್ತಿರುವವರು ಮಲಯಾಳಂ ತಾರೆ ಭಾವನಾ. ಈ ನಡುವೆ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ 'ಪೃಥ್ವಿ' ಚಿತ್ರೀಕರಣ ಮುಗಿದಿದೆ. ಈ ಚಿತ್ರವನ್ನು ಸೂರಪ್ಪ ಬಾಬು ಮತ್ತು ಎನ್ ಎಸ್ ರಾಜಕುಮಾರ್ ಜಂಟಿಯಾಗಿ ನಿರ್ಮಿಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X