ಬ್ಲ್ಯಾಕ್ ಕೋಬ್ರಾ ವಿಜಯ್ ಜೊತೆ ರಮ್ಯಾ ಹೊಸ ಚಿತ್ರ
ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ರಮ್ಯಾ ಮತ್ತು ವಿಜಯ್ ಜೋಡಿಯ ಚಿತ್ರ ಅಕ್ಟೋಬರ್ 27 ರಂದು ಸೆಟ್ಟೇರಲಿದೆ. ಚಿತ್ರದ ಹೆಸರು 'ಜಾನಿ ಮೇರಾ ನಾಮ್'. ಕೇಳಲು ಹಿಂದಿ ಚಿತ್ರದಂತಿದ್ದರೂ ಇದೊಂದು ಅಪ್ಪಟ ಕನ್ನಡ ಚಿತ್ರ. ವಿತರಕ ಜಯಣ್ಣ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.
ಅಕ್ಟೋಬರ್ 27ರಿಂದ ಸತತ 60 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಲೂಸ್ ಮಾದ ಖ್ಯಾತಿಯ ಯೋಗೇಶ್ ಜೊತೆ ರಮ್ಯಾ ಅಭಿನಯಿಸುತ್ತಿರುವ 'ಸಿದ್ಲಿಂಗು' ಚಿತ್ರ ಜನವರಿ 16 ರಂದು ಸೆಟ್ಟೇರಲಿದೆ. ಹಾಗಾಗಿ 'ಜಾನಿ ಮೇರಾ ನಾಮ್' ಚಿತ್ರವನ್ನು ಒಪ್ಪಿಕೊಂಡಿರುವುದಾಗಿ ರಮ್ಯಾ ಹೇಳಿದ್ದಾರೆ.
ಪ್ರೀತಿಸುವುದೇ ಚಿತ್ರದ ನಾಯಕನ ಕೆಲಸ. ಹಾಗಾಗಿ ಚಿತ್ರದ ಅಡಿಬರಹಕ್ಕೆ ಪ್ರೀತಿ ಮೇರಾ ಕಾಮ್ ಎಂದಿಡಲಾಗಿದೆ. ಊಟದ ಜೊತೆಗಿನ ಉಪ್ಪಿನಕಾಯಿ ತರಹ ಒಂದಷ್ಟು ಆಕ್ಷನ್, ಸೆಂಟಿಮೆಂಟು ಚಿತ್ರದಲ್ಲಿ ಉಂಟಂತೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿರುತ್ತದೆ.
ರಮ್ಯಾ ದುನಿಯಾ ವಿಜಯ್ ಜಾನಿ ಮೇರಾ ಕಾಮ್ ಪ್ರೀತಂ ಗುಬ್ಬಿ ವಿ ಹರಿಕೃಷ್ಣ duniya vijay ramya preetham gubbi johny mera naam v harikrishna


Click it and Unblock the Notifications