ಇನ್ಮುಂದೆ ಪಂಕಜ್ ಗತಿ ಏನು ಎನ್ನುತ್ತಿದೆ ಗಾಂಧಿ ನಗರ!

ಚೈತ್ರದ ಚಂದ್ರಮ ಚಿತ್ರದ ಮೂಲಕ ಸಿನಿಬದುಕು ಪ್ರಾರಂಭಿಸಿದ ನಾರಾಯಣ್ ಮಗ ಪಂಕಜ್, ನಂತರ ಚೆಲುವಿನ ಚಿಲಿಪಿಲಿ, ಚೈತ್ರದ ಚಂದ್ರಮ ಹಾಗೂ ದುಷ್ಟ ಮೂಲಕ ಸಿನಿಮಾಯಾನವನ್ನು ಮುಂದುವರಿಸಿದ್ದರು. ನಾರಾಯಣ್ ಘೋಷಿತ ಕೆಲವು ಚಿತ್ರಗಳಲ್ಲಿ ಪಂಕಜ್ ನಟಿಸಬೇಕಿತ್ತು. ಈಗ ಪಂಕಜ್ ಆಕಾಶ ನೋಡುವಂತಾಗಿದೆ.
ಏಕಾಏಕಿ ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು, ತಮ್ಮ ಸತತ ಸೋಲಿಗೆ ಕಾರಣವನ್ನು ಪತ್ತೆ ಮಾಡಿದ್ದರೆ ಸಾಕಿತ್ತು ಎಂದು ಅವರಭಿಮಾನಿಗಳು ಹೇಳುತ್ತಿದ್ದರೆ ಇತ್ತ ಮಗ ಪಂಕಜ್ ಹೌದೆಂಬಂತೆ ತಲೆ ಅಲ್ಲಾಡಿಸುತ್ತಿದ್ದಾರಂತೆ. ಪಾಪ, ಪಂಕಜ್ ಗೆ ಇನ್ಯಾರು ಗತಿ ಎಂದು ಜನ ಮಾತನಾಡುತ್ತಿದ್ದಾರೆ ಎಂಬ ಮಾತು ಗಾಂಧಿನಗರದ ಅಂಗಳದಿಂದ ತೂರಿಬಂದಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Kannada Director S Narayan has announced he doesn't plan to work as a director and producer in future. Narayan retires from direction and production will focus solely on his work as actor.


Click it and Unblock the Notifications











