»   » ವಿದೇಶಯಾತ್ರೆ ಪೂರೈಸಿದ ಪಾನ್ ವಾಲ

ವಿದೇಶಯಾತ್ರೆ ಪೂರೈಸಿದ ಪಾನ್ ವಾಲ

Subscribe to Filmibeat Kannada

ಮೂಲತಃ ಪಾನ್ ವ್ಯಾಪಾರಿಯಾದ ಪರಮೇಶ ವಿದೇಶಯಾತ್ರೆ ಮುಗಿಸಿ ಬಂದಿದ್ದಾನೆ. ಆದರೆ ಆತ ಹೊರದೇಶಕ್ಕೆ ಹೋಗಿದ್ದು ವ್ಯಾಪಾರಕ್ಕಾಗಲ್ಲ. ಪ್ರೀತಿಗಾಗಿ. ಅತ್ಯಂತ ಬೇಡಿಕೆಯ ಗೀತರಚನೆಕಾರರಾಗಿರುವ ಡಾ:ವಿ.ನಾಗೇಂದ್ರಪ್ರಸಾದ್ ಅವರು ಶ್ರೀಮತಿ ಲಕ್ಷ್ಮೀ ಅವರು ಅರ್ಪಿಸಿ ಆದಿತ್ಯ ಆರ್ಟ್ಸ್ ಎಂ.ಎಲ್.ಸಿ ಲಾಂಛನದಲ್ಲಿ ಅಂತು ಇಂತು ಪ್ರೀತಿ ಬಂತು ಚಿತ್ರದ ನಾಯಕ ಆದಿತ್ಯಬಾಬು ನಿರ್ಮಿಸುತ್ತಿರುವ ಶಿವರಾಜಕುಮಾರ್ ಅಭಿನಯದ ಪರಮೇಶ ಪಾನ್‌ವಾಲ ಚಿತ್ರಕ್ಕೆ 'ಸುಮ್ ಸುಮ್ಕೆ ಸುಮ್ ಸುಮ್ಕೆ ಇವಳು ಸುಮ್ಕೆ ಇರಲ್ಲ 'ಹಾಗೂ 'ಅಂತೂ ನನ್ಗೆ ಇದೀಗ ಅಂತೂ ನೀನು ಬಂದಾಗ' ಎಂಬ ಎರಡು ಗೀತೆಗಳನ್ನು ಬರೆದಿದ್ದಾರೆ.

ಈ ಎರಡು ಹಾಡುಗಳು ಜಿನಿವಾ, ಸ್ವಿಡ್ಜರ್‌ಲ್ಯಾಂಡ್, ಲುಸಾನ್‌ಸಿಟಿ ಹಾಗೂ ಲಂಬೋಜಿನಾಗಳಲ್ಲಿ ಚಿತ್ರೀಕೃತವಾಗಿದೆ. ಶಿವರಾಜಕುಮಾರ್ ಹಾಗೂ ಸುರ್ವಿನ್‌ಚಾವ್ಲಾ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಮಹೇಶ್‌ಬಾಬು ಪರಮೇಶ ಪಾನ್‌ವಾಲ ಚಿತ್ರವನ್ನು ಜನಾರ್ಧನ್ ಮಹರ್ಷಿ ಅವರು ಬರೆದಿರುವ ಕತೆಗೆ ಚಿತ್ರಕತೆ ಬರೆದು ನಿರ್ದೇಶಿಸುತ್ತಿದ್ದಾರೆ. ವೀನಸ್‌ಮೂರ್ತಿ ಛಾಯಾಗ್ರಹಣ, ವಿ.ಹರಿಕೃಷ್ಣರ ಸಂಗೀತವಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಸುರ್ವಿನ್‌ಚಾವ್ಲಾ, ಸೋನು, ಶ್ರೀನಿವಾಸ ಮೂರ್ತಿ, ಆಶೀಶ್ ವಿದ್ಯಾರ್ಥಿ, ಚಿತ್ರಾಶೆಣೈ, ಅಕುಲ್ ಬಾಲಾಜಿ, ರೇಖಾ ಮುಂತಾದವರಿದ್ದಾರೆ.
(ದಟ್ಸ್ ಸಿನಿವಾರ್ತೆ)

ಮಗಳೊಂದಿಗೆ ಮತ್ತೆ ಶಿವರಾಜ್ ಅಭಿನಯ
ಹೆಂಗಳೆಯರ ಮನದಲ್ಲಿ ಅಣ್ಣನಾದ ಪಾನ್ ವಾಲ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada