For Quick Alerts
  ALLOW NOTIFICATIONS  
  For Daily Alerts

  ಸುದೀಪ್ ತೆಲುಗು ರೀಮೇಕ್ 'ಕಿಕ್‌'ಗೆ ಮುಹೂರ್ತ ಫಿಕ್ಸ್

  By Rajendra
  |

  ರಿಮೇಕ್ ಚಿತ್ರಗಳ ಸರದಾರ ಸುದೀಪ್ ಕೈಗೆತ್ತಿಕೊಂಡಿರುವ ಮತ್ತೊಂದು ತೆಲುಗು ರೀಮೇಕ್ ಚಿತ್ರ 'ಕಿಕ್'. ಎನ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕನ್ನಡದಲ್ಲಿ ಇನ್ನೂ ಶೀರ್ಷಿಕೆ ನಿಗದಿಯಾಗಿಲ್ಲ. 'ಚಿಂಗಾರಿ' ಚಿತ್ರದ ಮೂಲಕ ನಿರ್ದೇಶಕನಾಗಿ ಬದಲಾಗಿರುವ ಹರ್ಷಾ ನಿರ್ದೇಶನದ ಚಿತ್ರ ಇದಾಗಿದೆ.

  ತೆಲುಗಿನಲ್ಲಿ ರವಿತೇಜ ಅಭಿನಯದ 'ಕಿಕ್' ಎಂಬ ಚಿತ್ರ ಭರ್ಜರಿ ಹಿಟ್ ದಾಖಲಿಸಿತ್ತು. ಈಗ ಇದೇ ಚಿತ್ರದ ಕನ್ನಡಕ್ಕೆ ತರುತ್ತಿದ್ದಾರೆ. ಮಾರ್ಚ್ 24ರಂದು ಚಿತ್ರ ಸೆಟ್ಟೇರಲಿದೆ. ಈ ಹಿಂದೆ ಇದೇ ರವಿತೇಜ ಅಭಿನಯದ 'ವಿಕ್ರಮಾರ್ಕುಡು' ಚಿತ್ರವನ್ನು 'ವೀರ ಮದಕರಿ'ಯಾಗಿ ಸುದೀಪ್ ಕನ್ನಡಕ್ಕೆ ತಂದಿದ್ದರು.

  ಕನ್ನಡ 'ಕಿಕ್' ಚಿತ್ರದ ಕಲಾವಿದರು ಹಾಗೂ ತಾಂತ್ರಿಕ ಬಳಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಸದ್ಯಕ್ಕೆ ಹರ್ಷ ಅವರು ಬ್ಯಾಂಕಾಕ್‌ನಲ್ಲಿದ್ದಾರೆ. ಗುಂಡ್ರಗೋವಿ ಸತ್ಯ ಮುಖ್ಯಭೂಮಿಕೆಯಲ್ಲಿರುವ ಚಿತ್ರದ ಹಾಡಿನ ನೃತ್ಯ ಸಂಯೋಜನೆಗಾಗಿ ಅವರು ಬ್ಯಾಂಕಾಕ್‌ನಲ್ಲಿದ್ದು, ಅಲ್ಲಿಂದ ಹಿಂತಿರುಗಿದ ಬಳಿಕವಷ್ಟೇ ಕಿಕ್ ಸೆಟ್ಟೇರಲಿದೆ. (ಏಜೆನ್ಸೀಸ್)

  English summary
  Kannada actor Sudeep all set to remake Telugu hit Kick in Kannada. The movie is yet to be titled. The movie is being produced by N.Kumar and directed by “Chingaari’ director Harsha will be launched on March 24.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X