ಸುದೀಪ್ 'ಮಿಸ್ಟರ್ ತೀರ್ಥ'ಕ್ಕೆ ಕಡೆಗೂ ಮೋಕ್ಷ
ಆಗ ಬಿಡುಗಡೆಯಾಗುತ್ತೆ ಈಗ ತೆರೆಗೆ ಬರುತ್ತೆ ಎಂದು ನಿರೀಕ್ಷಿಸುತ್ತಿದ್ದ 'ಮಿಸ್ಟರ್ ತೀರ್ಥ' ಚಿತ್ರ ಕಡೆಗೂ ಈ ವಾರ ತೆರೆಕಾಣುತ್ತಿದೆ. ಈ ಹಿಂದೆ ಈ ಚಿತ್ರಕ್ಕೆ ತೀರ್ಥ ಎಂದು ಹೆಸರಿಡಲಾಗಿತ್ತು. ಬಳಿಕ ಮಿಸ್ಟರ್ ತೀರ್ಥ ಎಂದಾಯಿತು. ತಂದೆ ಮತ್ತು ಬೇಜಾವಾಬ್ದಾರಿ ಮಗನ ನಡುವಿನ ಭಾವನಾತ್ಮಕ ಸಂಬಂಧಗಳೇ ಚಿತ್ರದ ಕತೆ.
ತಂದೆಯ ಪಾತ್ರದಲ್ಲಿ ಅನಂತನಾಗ್ ಹಾಗೂ ಮಾನಸಿಕ ಅಸ್ವಸ್ಥನಾಗಿ ಸುದೀಪ್ ಅಭಿನಯಿಸಿದ್ದಾರೆ. ಸುದೀಪ್ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ಸಲೋನಿ. ಹಾಸ್ಯನಟ, ಸಂಗೀತ ನಿರ್ದೇಶಕ ಹಾಗೂ ನಿರ್ದೇಶಕ ಸಾಧುಕೋಕಿಲಾ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರೊಂದಿಗೆ ನಿರ್ದೇಶನವನ್ನೂ ಮಾಡಿದ್ದಾರೆ.
ದೂರದ ಬ್ಯಾಂಕಾಕ್‌ನಲ್ಲಿ ಮೂರು ಗೀತೆಗಳ ಚಿತ್ರೀಕರಣ ಸೇರಿದಂತೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಶ್ರೀಪವಮಾನ ಆರ್ಟ್ಸ್ ಲಾಂಛನದಲ್ಲಿ ಶ್ರೀರಾಮ್, ಗೋಪಾಲಕೃಷ್ಣ(ಗೋಪಿ) ಹಾಗೂ ಕುಮಾರ್ ನಿರ್ಮಿಸಿರುವ ಚಿತ್ರವಿದು.
ಗುರುಕಿರಣ್ ಸಂಗೀತ, ಜೋನಿಹರ್ಷ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ದಾಸರಿಶ್ರೀನಿವಾಸರಾವ್ ಛಾಯಾಗ್ರಹಣವಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಅನಂತನಾಗ್, ಗೀತಾ, ದೊಡ್ಡಣ್ಣ, ಸಾಧುಕೋಕಿಲಾ ಮುಂತಾದವರಿದ್ದಾರೆ.


Click it and Unblock the Notifications











