ಕಿಚ್ಚ ಸುದೀಪ್ ಈಗ ಎರಡು ಕೋಟಿಗೊಬ್ಬ ನಟ
ಕಿಚ್ಚ ಹಾಗೂ ನಲ್ಲ ಖ್ಯಾತಿಯ ಸುದೀಪ್ ಈಗ ಎರಡು ಕೋಟಿಗೊಬ್ಬ ನಟ. ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ಕೋಟಿಗೊಬ್ಬ' ಚಿತ್ರವನ್ನು ನಿರ್ಮಿಸಿದ್ದ ಸೂರಪ್ಪ ಬಾಬು ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ 'ಕೋಟಿಗೊಬ್ಬ 2' ಎಂದು ಹೆಸರಿಡಲಾಗಿದೆ.
ಆದರೆ ಈ ಚಿತ್ರ 'ಕೋಟಿಗೊಬ್ಬ' ಚಿತ್ರದ ಮುಂದುವರಿದ ಭಾಗವಂತೂ ಖಂಡಿತ ಅಲ್ಲ ಎನ್ನಲಾಗಿದೆ. ಚಿತ್ರಕ್ಕೆ 'ಕೋಟಿಗೊಬ್ಬ 2' ಎಂದು ಹೆಸರಿಡಲಾಗಿದೆಯಷ್ಟೆ. ಸುದೀಪ್ ಹುಟ್ಟುಹಬ್ಬದ ದಿನ ಸೆ.2ರಂದು ಚಿತ್ರ ಸೆಟ್ಟೇರಲಿದೆ. ಆದರೆ ಕಲಾವಿದರ, ತಂತ್ರಜ್ಞರ ಆಯ್ಕೆ ಇನ್ನೂ ಅಂತಿಮವಾಗಿಲ್ಲ.
ವಿಷ್ಣುವರ್ಧನ್ ಅಭಿನಯದ ಕೋಟಿಗೊಬ್ಬ ಚಿತ್ರ ಬಾಷಾ ಚಿತ್ರದ ರೀಮೇಕ್ ಆಗಿತ್ತು. ಆದರೆ ಈಗ ಬರಲಿರುವ ಕೋಟಿಗೊಬ್ಬ 2 ಚಿತ್ರದ ಕುಲ, ಗೋತ್ರ, ನಕ್ಷತ್ರ, ರಾಶಿ ಇನ್ನೂ ಗೊತ್ತಾಗಿಲ್ಲ. ಸದ್ಯಕ್ಕೆ ಟೈಟಲ್ ಒಂದನ್ನು ಮಾತ್ರ ಇಡಲಾಗಿದೆಯಷ್ಟೆ. (ಏಜೆನ್ಸೀಸ್)
More from Filmibeat
English summary
Kichaa Sudeep is all set to star in the sequel of Kotigobba, which starred late matinee idol Dr. Vishnuvardhan. The second part is expected to take off by this year end.


Click it and Unblock the Notifications











