ಬಳ್ಳಾರಿಯಲ್ಲಿ ಹವಾ ಎಬ್ಬಿಸಿದ ಸುದೀಪ್ 'ವಿಷ್ಣುವರ್ಧನ'

By Rajendra

ಬಳ್ಳಾರಿಯಲ್ಲಿ ಸಾಮಾನ್ಯವಾಗಿ ಕನ್ನಡ ಚಿತ್ರಗಳು ಹವಾ ಎಬ್ಬಿಸಿದ ಉದಾಹರಣೆಗಳು ಕಡಿಮೆಯೆಂದೇ ಹೇಳಬೇಕು. ಅಲ್ಲಿ ಏನಿದ್ದರೂ ತೆಲುಗು ಚಿತ್ರಗಳದ್ದೇ ಮೇಲುಗೈ. ಅಂತಹ ಕಡೆ ಸುದೀಪ್ ಅಭಿನಯದ 'ವಿಷ್ಣುವರ್ಧನ' ಚಿತ್ರ ಹೊಸ ಹವಾ ಎಬ್ಬಿಸಿದೆ.

ರಾಜ್ಯದಾದ್ಯಂತ ತೆರೆಕಂಡಿರುವ 'ವಿಷ್ಣುವರ್ಧನ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಗೆ ಸುದೀಪ್ ಭೇಟಿ ನೀಡಿದ್ದರು. 'ವಿಷ್ಣುವರ್ಧನ' ಸಕ್ಸಸ್ ಯಾತ್ರೆಯಲ್ಲಿ ಪಾಲ್ಗೊಂಡು ಅಭಿಮಾನಿಗಳ ಕಡೆಗೆ ಕೈಬೀಸುತ್ತಾ ಹೊಸಪೇಟೆ ಜನತೆಯ ಸಂತಸಕ್ಕೆ ಕಾರಣರಾದರು.

ತೆರೆದ ವಾಹನದಲ್ಲಿ ಬಂದ ಸುದೀಪ್ ಅವರನ್ನು ನೋಡಲು ಅವರ ಆಟೋಗ್ರಾಫ್ ಪಡೆಯಲು ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ತಮ್ಮ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ ಎಂದು ಸುದೀಪ್ ಈ ಸಂದರ್ಭದಲ್ಲಿ ತಿಳಿಸಿದರು. (ಒನ್‌ಇಂಡಿಯಾ ಕನ್ನಡ)

More from Filmibeat

English summary
Sudeep lead latest film Vishnuvardhana successfully showing in all over Karnataka. Recently Vishnuvardhana film unit conducted road show in Bellary and Hospet receives good response from audience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X