»   » ದುಬೈ ಬಾಬು ಉಪ್ಪಿಗೆ ಜೋಡಿಯಾದ ನಿಕಿತಾ

ದುಬೈ ಬಾಬು ಉಪ್ಪಿಗೆ ಜೋಡಿಯಾದ ನಿಕಿತಾ

Subscribe to Filmibeat Kannada

ಉಪೇಂದ್ರ ಅಭಿನಯದ ಮುಂದಿನ ಚಿತ್ರದಲ್ಲಿ ದಕ್ಷಿಣ ಭಾರತದಲ್ಲಿ ಬೇಡಿಕೆ ನಟಿ ನಿಕಿತಾ ನಟಿಸಲಿದ್ದಾರೆ. ಚಿತ್ರಕ್ಕೆ 'ದುಬೈಬಾಬು' ಎಂದು ಹೆಸರಿಸಲಾಗಿದೆ. ತೆಲುಗಿನಲ್ಲಿ ರವಿತೇಜ ಹಾಗೂ ನಯನತಾರಾ ನಟಿಸಿದ್ದ ದುಬೈ ಸೀನು ಚಿತ್ರದ ಕನ್ನಡ ಅವತರಣಿಕೆ ಇದಾಗಲಿದೆ. ನಾಗಣ್ಣ, ಶೈಲೇಂದ್ರ ಬಾಬು ಹಾಗೂ ಉಪೇಂದ್ರ ತಂಡದಿಂದ ಮತ್ತೊಂದು ಎರವಲು ಸಂಸಾರಿಕ ಚಿತ್ರ ತಯಾರಿಯ ಹಂತದಲ್ಲಿದೆ.

ಈ ಚಿತ್ರದ ಮೂಲಕ ನಿರ್ಮಾಪಕ ಶೈಲೇಂದ್ರ ಬಾಬು, ನಿರ್ದೇಶಕ ನಾಗಣ್ಣ, ನಟ ಉಪೇಂದ್ರ ಅವರ ಯಶಸ್ವಿ ಜೋಡಿ ಮತ್ತೆ ಒಂದಾಗಿದೆ. ಕುಟುಂಬ, ಗೌರಮ್ಮ ಅಂತಹ ರಿಮೇಕ್ ಆದರೂ ಕೌಟುಂಬಿಕ ಚಿತ್ರ ಕೊಟ್ಟು ಜನ ಮನಗೆದ್ದ ಸಾಧನೆ ಇವರ ಪಾಲಿಗಿದೆ.ಈ ಚಿತ್ರಕ್ಕೆ ಶ್ರೀಧರ್ ಅವರ ಸಂಗೀತವಿದ್ದು, ಖ್ಯಾತ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮತ್ತೆ ಉಪೇಂದ್ರ ಅವರಿಗೆ ಸಾಹಸ ದೃಶ್ಯಗಳ ಅಭಿನಯ ಹೇಳಿಕೊಡಲಿದ್ದಾರೆ.

ಕನ್ನಡದಲ್ಲಿ ಮಿಂಚುತ್ತಿರುವ ನಿಕಿತಾ
ಈಗಾಗಲೇ ತೆಲುಗು, ತಮಿಳು, ಮಲೆಯಾಳಂ ನಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಿಕಿತಾ ಅವರಿಗೆ, ಕನ್ನಡದಲ್ಲಿ ಅವಕಾಶಗಳು ಹರಿದು ಬರುತ್ತಿದೆ. ಸುದೀಪ್ ಜೊತೆ ಈ ಮುಂಚೆ ನಟಿಸಿದ 'ಮಹಾರಾಜ' ಹೇಳಹೆಸರಿಲ್ಲದಂತೆ ನೆಲಕಚ್ಚಿತ್ತು. ಆನಂತರ ಮತ್ತೆ ರಾಜಕುಮಾರಿಯಾಗಿ ರವಿಚಂದ್ರನ್ ಅವರ ತಮ್ಮ ಬಾಲಾಜಿ ಜತೆ ಕಾಣಿಸಿಕೊಂಡರು. ಆ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಪುನೀತ್ ಜತೆ ವಂಶಿ ಚಿತ್ರಕ್ಕೂ ಆಯ್ಕೆಯಾಗಿದ್ದು ಅವರ ಪಾಲಿಗೆ ಒಳ್ಳೆ ಬೆಳವಣಿಗೆ. ತಮಿಳಿನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪ್ರಕಾಶ್ ರೈ, ಜಯರಾಂ, ಎಸ್ ಪಿ ಚರಣ್ ಅಭಿನಯದ 'ಸ-ರೋ-ಜ' ಚಿತ್ರದಲ್ಲಿ ಕುಣಿದು ಕುಪ್ಪಳಿಸಿ ರಸಿಕರ ಮನಗೆದ್ದಿರುವ ನಿಕಿತಾಳಿಗೆ ಕನ್ನಡದಲ್ಲೇ ಡಬ್ ಮಾಡುವ ಆಸೆಯಂತೆ. ಕನ್ನಡದಲ್ಲಿ ಹೆಚ್ಚಿನ ಅವಕಾಶ ದೊರೆತರೆ, ಕನ್ನಡ ಕಲಿಕೆ ಮುಂದುವರೆಸುತ್ತೇನೆ ಎನ್ನುತ್ತಾರೆ.
(ದಟ್ಸ್ ಕನ್ನಡಸಿನಿ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada