ಏಪ್ರಿಲ್‌ನಲ್ಲಿ 'ಸೂಪರ್' ಅದ್ದೂರಿ ಶತದಿನೋತ್ಸವ ಸಮಾರಂಭ
2030ರ ಭಾರತದ ಕಲ್ಪನೆಯನ್ನು ಉಪೇಂದ್ರ ಅವರು 'ಸೂಪರ್' ಚಿತ್ರದಲ್ಲಿ ತೋರಿರುವ ರೀತಿ ಕನ್ನಡಿಗರ ಮನ ಗೆದ್ದಿದೆ. ಕನ್ನಡದಲ್ಲಿ 'ಸೂಪರ್' ಶತದಿನೋತ್ಸವದತ್ತ ಸಾಗುತ್ತಿದೆ. ಈ ಸಮಯದಲ್ಲಿ ನೆರೆಯ ಆಂಧ್ರದಾದ್ಯಂತ 'ಸೂಪರ್' ಚಿತ್ರ ಕಳೆದವಾರ ಬಿಡುಗಡೆಯಾಗಿದೆ. ಟಾಲಿವುಡ್‌ನ ಪ್ರೇಕ್ಷಕರು 'ಸೂಪರ್' ಚಿತ್ರವನ್ನು ಸೂಪರ್ ಎನ್ನುತ್ತಿದ್ದಾರೆ.
ಆಂದ್ರದ 95ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಗಳಿಕೆ ಆರಂಭದ ದಿನದಿಂದಲ್ಲೂ ಉತ್ತಮವಾಗಿದೆ ಎಂದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ತಿಳಿಸಿದ್ದಾರೆ. ಏಪ್ರಿಲ್‌ನಲ್ಲಿ ಕನ್ನಡದ 'ಸೂಪರ್ ಚಿತ್ರದ ಶತದಿನೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲು ನಿರ್ಮಾಪಕರು ನಿರ್ಧರಿಸಿದ್ದಾರೆ. ನಂತರ ತಮಿಳಿನಲ್ಲೂ ಈ ಚಿತ್ರ ಬಿಡುಗಡೆಯಾಗಲಿದೆ.
ಅಲ್ಲಿನ ಅಭಿಮಾನಿಗಳ ಪ್ರಶಂಸೆಗೂ ನಮ್ಮ ಚಿತ್ರ ಪಾತ್ರವಾಗಲಿದೆ ಎನ್ನುತ್ತಾರೆ ರಾಕ್‌ಲೈನ್‌ವೆಂಕಟೇಶ್. ಒಟ್ಟಿನಲ್ಲಿ ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ರಾಕ್‌ಲೈನ್ ಪ್ರೊಡಕ್ಷನ್ಸ್‌ನಿಂದ ನಿರ್ಮಾಣವಾಗಿರುವ, ಕರುನಾಡ ಹೆಮ್ಮೆಯ ನಟ ಉಪೇಂದ್ರ ನಟಿಸಿ ನಿರ್ದೇಶಿಸಿರುವ 'ಸೂಪರ್' ಚಿತ್ರಕ್ಕೆ ಮೆಚ್ಚುಗೆಯ ಮಾತು ಕೇಳಿ ಬರುತ್ತಿರುವುದು ನಿಜಕ್ಕೂ ಸಂತಸದ ವಿಷಯ.


Click it and Unblock the Notifications











