»   » ಜೀಕನ್ನಡದ 'ಪ್ರಚಂಡ ಪುಟಾಣಿ' ಅಂತಿಮ ಸ್ಪರ್ಧೆ

ಜೀಕನ್ನಡದ 'ಪ್ರಚಂಡ ಪುಟಾಣಿ' ಅಂತಿಮ ಸ್ಪರ್ಧೆ

Subscribe to Filmibeat Kannada

ಬೆಂಗಳೂರು, ಫೆ 22: ಜೀ ಕನ್ನಡ ವಾಹಿನಿಯ 'ಪ್ರಚಂಡ ಪುಟಾಣಿ' ಕಾರ್ಯಕ್ರಮದಅಂತಿಮ ಹಂತ ಶನಿವಾರ(ಫೆ.23 ) ಮಧ್ಯಾಹ್ನ 2 ಗಂಟೆಗೆ ಪ್ರಸಾರವಾಗಲಿದೆ. ಅಂತಿಮ ಹಣಾಹಣಿಯಲ್ಲಿರುವ ನಾಲ್ಕು ಪುಟಾಣಿ ಪ್ರತಿಭೆಗಳಲ್ಲಿ ಯಾರು ಪ್ರಚಂಡಪುಟಾಣಿಯಾಗಿ ಆಯ್ಕೆಯಾಗುತ್ತಾರೆ ಎಂಬುದನ್ನು ವೀಕ್ಷಿಸಬಹುದಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ದಾಖಲೆಯ ಸಾಧನೆ ಮಾಡಿರುವ ಕರ್ನಾಟಕದ ಪುಟಾಣಿ ಪ್ರತಿಭೆಗಳನ್ನು ಪರಿಚಯಿಸುವ ಕಾರ್ಯಕ್ರಮ ಇದಾಗಿದ್ದು ಕರ್ನಾಟಕದಾದ್ಯಂತದಿಂದ ಸುಮಾರು 600ಕ್ಕೂ ಹೆಚ್ಚು ಪ್ರತಿಭೆಗಳು ಭಾಗವಹಿಸಿದ್ದರು. ಅವರಲ್ಲಿ 24 ಪುಟಾಣಿಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇವರಲ್ಲಿ 4 ಜನರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಇವರಲ್ಲಿ ಒಬ್ಬರನ್ನು ಕರ್ನಾಟಕದ 'ಪ್ರಚಂಡ ಪುಟಾಣಿ'ಯಾಗಿ ಆಯ್ಕೆ ಮಾಡಲಾಗುವುದು.

ಅಂತಿಮ ಹಂತಕ್ಕೆ ಕ್ರಿಕೆಟ್ ಆಟಗಾರ ಶ್ರೇಯಸ್ ಗೋಪಾಲ್, ನೃತ್ಯಗಾರ್ತಿ ತಾನ್ವಿ ರಾವ್ ಬಿ.ಎಚ್, ರಾಷ್ಟ್ರ ಮಟ್ಟದ ಈಜುಗಾರ್ತಿ ಓಹಿಲೇಶ್ವರಿ ಎಂ.ಕೆ, ಜಾದುಗಾರ ಕರುಣ್ ಕೃಷ್ಣ ಆಯ್ಕೆಯಾಗಿದ್ದಾರೆ. ಇವರಲ್ಲಿ ಪ್ರಚಂಡ ಪುಟಾಣಿಯಾಗಿ ಆಯ್ಕೆಯಾಗುವ ಪ್ರತಿಭೆಗೆ ಒಂದು ಲಕ್ಷ ರೂಪಾಯಿ ಬಹುಮಾನವನ್ನು ನೀಡಲಾಗುವುದು ಎಂದು ಜೀಕನ್ನಡ ವಾಹಿನಿಯ ಪ್ರಕಟಣೆ ತಿಳಿಸಿದೆ. ಅಂತಿಮ ಸಂಚಿಕೆಯ ನಿರ್ಣಾಯಕರಾಗಿ ನಟ ನಿರ್ದೇಶಕ ದ್ವಾರಕೀಶ್, ಮಾಜಿ ಸಚಿವೆ ರಾಣಿ ಸತೀಶ್, ಕರ್ನಾಟಕ ಇನ್ ಸ್ಟಿಟ್ಯೂಟ್ ಆಫ್ ಕ್ರಿಕೆಟ್‌ನ ಕೋಚ್ ಇರ್ಫಾನ್ ಸೇಠ್ ಭಾಗವಹಿಸಲಿದ್ದಾರೆ.

(ದಟ್ಸ್‌ಕಿರುತೆರೆಸುದ್ದಿ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada