ಸೆಕ್ಸಿ ಶಕೀಲಾ ಮದುವೆಗೆ ಸಿದ್ಧ ; ಗಂಡು ಹುಡುಕಿಕೊಡುವಿರಾ ?

By Super

ಸೆಕ್ಸಿ ಶಕೀಲಾ ಬೆಂಗಳೂರಿಗೆ ಬಂದಿದ್ದಾರೆ ! ಊರಿಗೆ ಬಂದವಳು ನೀರಿಗೆ ಬಾರದೆ ಇರುತ್ತಾಳೆಯೆ ? ಹೌದು, ಬೆಂಗಳೂರಿಗೆ ಬಂದ ಶಕೀಲಾ ಗಾಂಧಿನಗರಕ್ಕೂ ಬಂದಿದ್ದಾರೆ ; 'ಮೊನಾಲಿಸ" ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಶಕೀಲಾ ಎಂದರೆ ಗೊತ್ತಲ್ಲ ; ಒಂದು ಕೋನದಲ್ಲಿ ಕನ್ನಡದ ರೇಖಾದಾಸ್‌, ಮಂಜುಮಾಲಿನಿಯಂತೆ ಕಾಣುವ ಈಕೆ 'ಸಿನಿಮಾ ಸ್ಕೋಪ್‌" ಸುಂದರಿ. ಘಟಾನುಘಟಿ ನಾಯಕರುಗಳಿದ್ದೂ ನೆಲ ಕಚ್ಚಿದ ಮಲಯಾಳಂ ಚಿತ್ರರಂಗವನ್ನು ತನ್ನ ಭುಜಬಲದ ಮೇಲೆ ಮೇಲೆತ್ತಿದ ಎದೆಗಾತಿ. ತೆಲುಗಿನಲ್ಲೂ ಮಿಂಚಿದವಳು, ತಮಿಳಲ್ಲೂ ಮಿರುಗಿದವಳು, ಈಗ ಕನ್ನಡದತ್ತ ಮುಖ ಮಾಡಿದವಳು. ಈ ಮಲಯಾಳಿ ಆಂಟಿಯನ್ನು ಕನ್ನಡಕ್ಕೆ ಕರೆತಂದವರು ತುಂಟಾಟದ ನಿರ್ದೇಶಕ ಇಂದ್ರಜಿತ್‌.

'ಮೊನಾಲಿಸ" ಚಿತ್ರದಲ್ಲಿ ಶಕೀಲಾಗೆ ಮಹತ್ವದ ಪಾತ್ರವೊಂದಿದೆಯಂತೆ. ಚಿತ್ರದಲ್ಲಿ ಆಕೆಯದು ಕಾಲೇಜು ಶಿಕ್ಷಕಿ ಪಾತ್ರ. ಮೇಡಂ ಪಾತ್ರ ಶಕೀಲಾಗೆ ಹೊಸತೇನೂ ಅಲ್ಲ . ಆದರೆ ಆಕೆ ಚಿತ್ರಗಳಲ್ಲಿ ಹುಡುಗ ಹುಡುಗಿಯರಿಗೆ ಹೇಳಿಕೊಟ್ಟಿರುವುದು ಕಾಮಪಾಠವನ್ನು ಮಾತ್ರ! 'ಮೊನಾಲಿಸ" ಚಿತ್ರದ ಶಕೀಲಾ ಮೇಡಂ ಕೂಡ ಅಭಿಸಾರಿಕೆಯಾ ; ಗೊತ್ತಿಲ್ಲ , ಸದ್ಯಕ್ಕೆ ಇಂದ್ರಜಿತ್‌ ಗುಮ್ಮನಂತಿದ್ದಾರೆ. ಧ್ಯಾನ್‌ ಹಾಗೂ ಸದಾ ಪ್ರಮುಖ ಭೂಮಿಕೆಯಲ್ಲಿರುವ 'ಮೊನಾಲಿಸ" ಚಿತ್ರದ ಆಕರ್ಷಣೆ ಶಕೀಲಾ ಸೇರ್ಪಡೆಯಿಂದ ಯಾವ ಮಟ್ಟಕ್ಕೆ ಹೆಚ್ಚಬಹುದು ಎನ್ನುವ ಲೆಕ್ಕಾಚಾರದಲ್ಲಿ ಇಂದ್ರಜಿತ್‌ ಧ್ಯಾನಶೀಲರು.

ಹಾಗೆ ನೋಡಿದರೆ ಶಕೀಲಾಗೆ ಕನ್ನಡ ಚಿತ್ರ ಇದು ಮೊದಲಲ್ಲ . ಈಗಾಗಲೇ ಕನ್ನಡ ಚಿತ್ರವೊಂದರಲ್ಲಿ ಆಕೆ ಅಭಿನಯಿಸಿದ್ದಾರೆ. '16ರಿಂದ 60" ಎನ್ನುವುದು ಚಿತ್ರದ ಹೆಸರಂತೆ. ಈ ಚಿತ್ರ ತೆರೆ ಕಂಡಿಲ್ಲ ಎನ್ನುತ್ತಾರೆ ಶಕೀಲಾ, ಕಾಣುವುದೂ ಅನು ಮಾನ.

ಮೊನ್ನೆ , ಜ.20ರ ಮಂಗಳವಾರ ಬೆಂಗಳೂರಿನ ಬಾದಾಮಿ ಹೌಸ್‌ನಲ್ಲಿ ಸುದ್ದಿಗಾರರ ಎದುರಾಬದುರಾ ಕೂತ ಶಕೀಲಾ ಕಣ್ಣಲ್ಲಿ ಕಂಡದ್ದು , ಅದೇ ಕಣ್ಣು ಕತ್ತಿಯ ಅಂಚು ! ಆಕೆಗೆ ಎದುರಾದುದ್ದು ಕೂಡ ಗರಮಾಗರಂ ಪ್ರಶ್ನೆಗಳೇ. ಶಕೀಲಾ ನಾಚಲಿಲ್ಲ , ಅಳುಕಲಿಲ್ಲ , ಎಲ್ಲ ಪ್ರಶ್ನೆಗಳಿಗೂ ಯಥೋಚಿತವಾಗಿ ಉತ್ತರಿಸಿದರು.

ಒಂಚೂರು ಎದೆಯನ್ನು ತೋರಿಸಮ್ಮ ಎಂದು ನಿರ್ದೇಶಕ ಬಯಸಿದರೆ ಅದರಲ್ಲಿ ಏನು ತಪ್ಪಿದೆ ? ದೇಹ ಪ್ರದರ್ಶನ ಕೂಡ ಒಂದು ಮಿತಿಯಲ್ಲೇ ನಡೆಯುತ್ತದೆ. (ದೇಹವೇ ದೇಗುಲ ಎನ್ನುವ ಬಸವಣ್ಣನ ಮಾತು ಶಕೀಲಾಗೆ ಗೊತ್ತಾ ?) ಬೆತ್ತಲಾಗುವ ಈಗಿನ ಹೀರೋಯಿನ್‌ಗಳಿಗೆ ಹೋಲಿಸಿದರೆ ನಾನೇ ಎಷ್ಟೋ ವಾಸಿ ಎಂದು ಶಕೀಲಾ ತಮ್ಮ ಪಾತ್ರಗಳ ಸಮರ್ಥನೆಗೆ ಇಳಿದುಬಿಟ್ಟರು.

ಈವರೆಗೆ ಮಾಡಿರುವ ಯಾವುದೇ ಪಾತ್ರದ ಕುರಿತು ನನಗೆ ವಿಷಾದವಿಲ್ಲ . ಕೆಲವರು ನನ್ನ ಸೆಕ್ಸಿ ಅಪೀಲನ್ನು ಹೊಗಳುತ್ತಾರೆ. ಬೆನ್ನ ಹಿಂದೆ ಏನು ಮಾತನಾಡಿಕೊಳ್ಳುತ್ತಾರೆ ಎನ್ನುವುದು ನನಗೆ ಗೊತ್ತು ಎಂದು ಶಕೀಲಾ ನಕ್ಕರು.

ನಾನು ಮದುವೆ ಆಗಬೇಕೆಂದುಕೊಂಡಿದ್ದೇನೆ. ಲವ್‌ ಮ್ಯಾರೇಜ್‌ ನಂಗಿಷ್ಟ . ನನಗೆ ಯಾರಾದರೂ ಗಂಡು ಹುಡುಕಿಕೊಡುತ್ತೀರಾ ಎಂದು ಶಕೀಲಾ ನಗು ಮುಂದುವರಿಸಿದರು. ಸೆಕ್ಸಿ ಪಾತ್ರಗಳನ್ನು ಮಾಡುವುದಕ್ಕೆ ನಾನು ಅಂಜುವುದಿಲ್ಲ . ನನ್ನ ಶರೀರ ಹೀರೋಯಿನ್‌ ಪಾತ್ರಗಳಿಗೆ ತಕ್ಕಂತಿಲ್ಲ . ದಪ್ಪಗಿರುವುದರಲ್ಲಿ ನನ್ನ ತಪ್ಪೇನೂ ಇಲ್ಲ . ಶರೀರದ ಗಾತ್ರ ವಂಶಪಾರಂಪರ್ಯವಾಗಿ ಬಂದುದು. ಆದರೆ ಒಂದು ಮಾತು, ಪ್ರಮಾಣ ಮಾಡಿ ಹೇಳುತ್ತೇನೆ- ನಾನು ನೀಲಿ ಚಿತ್ರಗಳಲ್ಲಿ ಭಾಗವಹಿಸಿಲ್ಲ . ನನಗೆ ಮದುವೆಯಾಗಬೇಕಾದ ತಂಗಿಯರಿದ್ದಾರೆ -ಶಕೀಲಾ ಗಂಭೀರವಾಗಿ ಹೇಳಿದರು.

ಸಿನಿಮಾ ರಂಗಕ್ಕೆ ಬಂದುದಾದರೂ ಯಾಕೆಂದುಕೊಂಡಿದ್ದೀರಿ? ನಾನು ಕೆಮರಾ ಮುಂದೆ ನಿಂತ ತಾರುಣ್ಯದ ದಿನಗಳಲ್ಲಿ ಮನೆಯಲ್ಲಿ ಕಡು ಬಡತನವಿತ್ತು . ಸಿನಿಮಾದಿಂದಾಗಿ ಇವತ್ತು ಬದುಕು ಬದಲಾಗಿದೆ. ನನ್ನ ಅಪ್ಪ ಈಗ ಮನರಂಜನೆಯ ಕ್ಲಬ್‌ ಒಂದನ್ನು ನಡೆಸುತ್ತಿದ್ದಾರೆ. ಮನೆಯಲ್ಲಿ ಇಬ್ಬರು ತಂಗಿಯರಿದ್ದಾರೆ, ತಮ್ಮಂದಿರೂ ಇದ್ದಾರೆ.

ಕೆಲವರು ಅಭಿಮಾನಿ ಸಂಘ ಕಟ್ಟುತ್ತೇವೆಂದು ಮುಂದೆ ಬಂದಿದ್ದಾರೆ. ಪ್ರತಿದಿನ ನನಗೆ 150ಕ್ಕೂ ಹೆಚ್ಚು ಪತ್ರಗಳು ಹಾಗೂ 50ಕ್ಕೂ ಹೆಚ್ಚು ಇ-ಮೇಲ್‌ ಬರುತ್ತವೆ. ಆರಂಭದ ದಿನಗಳಲ್ಲಿ ಕೆಲವರು ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಮಾನಸಿಕವಾಗಿ ಕಿರುಕುಳ ಕೊಟ್ಟಿದ್ದಾರೆ. ಆ ಕುರಿತು ಈಗ ಕೆದಕುವುದು ಬೇಡ ಎಂದು ತಮ್ಮ ಪೂರ್ವಾಪರವನ್ನು ಶಕೀಲಾ ಬಿಚ್ಚಿಟ್ಟರು.

ಸಿಲ್ಕ್‌ಸ್ಮಿತಾ ಎನ್ನುವ ದುರಂತ ನಾಯಕಿಯನ್ನು ತನ್ನ ಜೊತೆ ಹೋಲಿಸುವುದು ಶಕೀಲಾಗೂ ಗೊತ್ತು . 'ಪ್ಲೇಗರ್ಲ್‌" ಎನ್ನುವ ಚಿತ್ರದಲ್ಲಿ ಸಿಲ್ಕ್‌ಸ್ಮಿತಾ ಜೊತೆ ಶಕೀಲಾ ಅಭಿನಯಿಸಿಯೂ ಇದ್ದಾರೆ. ಆಗ ಶಕೀಲಾ 10 ವರ್ಷದ ಬಾಲೆ. ತನ್ನನ್ನು ಸಿಲ್ಕ್‌ ಜೊತೆ ಗುರ್ತಿಸಿಕೊಳ್ಳುವುದು ಶಕೀಲಾಗೆ ಇಷ್ಟವಿದ್ದಂತಿಲ್ಲ . ನನ್ನ ಹಾಗೂ ಸಿಲ್ಕ್‌ಸ್ಮಿತಾ ವ್ಯಕ್ತಿತ್ವವೇ ಬೇರೆಬೇರೆ. ಸಿಲ್ಕ್‌ಸ್ಮಿತಾ ಐದು ಬೆಡ್‌ರೂಂಗಳ ಬಂಗಲೆ ಹೊಂದಿದ್ದರು. ಆ ರೀತಿಯ ಐಷಾರಾಮ ನನಗೆ ಇಷ್ಟವಿಲ್ಲ . ಅಲ್ಲದೆ, ಯಾವುದೇ ಸಮಾಜ ಸೇವೆಯ ಚಟುವಟಿಕೆಗಳಲ್ಲಿ ಸಿಲ್ಕ್‌ಸ್ಮಿತಾ ತೊಡಗಿರಲಿಲ್ಲ . ನಾನು ಆ ರೀತಿಯಲ್ಲ . ಸಮಾಜಸೇವೆ ನನಗೆ ಮನಸ್ಸಿದೆ. ಆದರೆ, ಸಮಾಜಸೇವೆಯಲ್ಲಿ ತೊಡಗುವಷ್ಟು ಶ್ರೀಮಂತಿಕೆ ಸದ್ಯಕ್ಕೆ ನನ್ನಲಿಲ್ಲ ಎಂದರು ಶಕೀಲಾ. ಅಂದರೆ, ಬಣ್ಣ ಒರೆಸಿದ ನಂತರ ಶಕೀಲಾ ಪಾತ್ರ- ಸಮಾಜಸೇವಕಿಯದು !?

ಶಕೀಲಾ ಮಾತು ಮುಗಿಸಿದರು.

More from Filmibeat

English summary
Wanted : Suitable bridegroom to dancer, actross, Sexy looking Shakeela. Shakeela is now acting in a kannada movie monalisa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X